ಪೊಲೀಸ್ ಮೇಲೆ ಹಲ್ಲೆಗೈದವರಿಗೆ ಜೈಲು ಶಿಕ್ಷೆ

court
Published on

ಹಗರಿಬೊಮ್ಮನಹಳ್ಳಿ: ಕರ್ತವ್ಯನಿರತ ಮುಖ್ಯಪೇದೆ ಮೇಲೆ ಹಲ್ಲೆ ನಡೆಸಿದವರಿಗೆ ಇಲ್ಲಿನ ಸಿವಿಲ್ ನ್ಯಾಯಾಲಯ ಒಂದೂವರೆ ವರ್ಷ ಜೈಲು ಶಿಕ್ಷೆ, ತಲಾ ಮೂರು ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶಿಸಿದೆ.

ತಾಲೂಕಿನ ರಾಯರಾಳು ತಾಂಡಾದ ರಂಗನಾಯ್ಕ 2017ರ ಜು.25ರಂದು ಟ್ರಾೃಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದಾರೆಂದು ಸ್ಥಳೀಯ ಠಾಣೆಯ ಮುಖ್ಯಪೇದೆ ವಿಶ್ವೇಶ್ವರಯ್ಯ ಅವರು ವಾಹನ ತಡೆದು ಲೈಸೆನ್ಸ್ ತೋರಿಸುವಂತೆ ಕೇಳಿದ್ದರು. ಆದರೆ, ರಂಗನಾಯ್ಕ ತನ್ನ ಸಹಚರರಾದ ಭಾಗ್ಯಾನಾಯ್ಕಾ, ಪತ್ಯಗುರುವನಾಯ್ಕ, ಉಮೇಶ್‌ನಾಯ್ಕ ಹಾಗೂ ಪಿತಾಂಬರ ಅವರನ್ನು ಸ್ಥಳಕ್ಕೆ ಕರೆಸಿ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದರು.

ಈ ಕುರಿತು ಮುಖ್ಯಪೇದೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪಣೆ ಪಟ್ಟಿ ಕೋರ್ಟ್‌ಗೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಧುಸೂದನ ಅವರು ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ತಳವಾರ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net