ಪೊಲೀಸ್ ಮಾಸಿಕ ಜನಸಂಪರ್ಕ ದಿವಸ; ನಗರ ಅಭಿವೃದ್ಧಿ ಸಂಬಂಧಿತ ಸರ್ಕಾರದ ಎಲ್ಲ ಸಂಸ್ಥೆಗಳ ಅಧಿಕಾರಿಗಳು ಭಾಗಿ ಸ್ಥಳದಲ್ಲಿಯೇ ಪರಿಹಾರ

bcp (1)
Published on

ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಆಯೋಜಿಸುವ ಮಾಸಿಕ ಸಭೆಯಲ್ಲಿ ಇನ್ನೂ ಮುಂದೆ ನಗರ ಅಭಿವೃದ್ಧಿ ಸಂಬಂಧಿತ ಸರ್ಕಾರದ ಎಲ್ಲ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಲಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳು ಬಗೆಹರಿಯಲಿವೆ.

ನಗರ ಪೊಲೀಸ್ ವಿಭಾಗದಿಂದ ಪ್ರತಿ ತಿಂಗಳು 2ನೇ ಮತ್ತು 4ನೇ ಶನಿವಾರ ‘ಮಾಸಿಕ ಜನಸಂಪರ್ಕ ದಿವಸ’ ಏರ್ಪಡಿಸಲಾಗುತ್ತದೆ. 2ನೇ ಶನಿವಾರ ಸಂಚಾರ ಪೊಲೀಸ್ ಠಾಣೆಯಿಂದ ವಿಭಾಗ ಮಟ್ಟದ ವರೆಗೆ ಹಾಗೂ 4ನೇ ಶನಿವಾರ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ ಮತ್ತು ವಿಭಾಗ ಮಟ್ಟದಲ್ಲಿ ನಡೆಯಲಿವೆ. ಇದರಲ್ಲಿ ಠಾಣಾಧಿಕಾರಿಯಿಂದ ಪೊಲೀಸ್ ಆಯುಕ್ತರು ಭಾಗವಹಿಸಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಸಮಸ್ಯೆಗಳ ಕುರಿತು ಸಲಹೆ, ಸೂಚನೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನಗಳು ನಡೆಯಲಿವೆ.

ನಾಗರಿಕ ಸಮಸ್ಯೆಗಳು ಕೇಳಿಬರುತ್ತಿದ್ದವು. ಅನ್ಯ ಸಮಸ್ಯೆಗಳು ಮತ್ತು ದೂರುಗಳನ್ನು ಆಯಾ ಇಲಾಖೆಗೆ ಪೊಲೀಸರು ವರ್ಗಾವಣೆ ಮಾಡುತ್ತಿದ್ದರು. ಇದೀಗ ಜನರ ಸಲಹೆ ಮೇರೆಗೆ ಮಾಸಿಕ ಜನಸಂಪರ್ಕ ದಿವಸ ಸಭೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಶಿಕ್ಷಣ, ಆರೋಗ್ಯ ಸೇರಿದಂತೆ ಸರ್ಕಾರದ ಎಲ್ಲ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಮೂಲಕ ಮಾಸಿಕ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬರುವ ಸಮಸ್ಯೆಗಳಿಗೆ ನಗರ ಅಭಿವೃದ್ಧಿ ಸಂಬಂಧಿತ ಸರ್ಕಾರದ ಎಲ್ಲ ಸಂಸ್ಥೆಗಳ ಅಧಿಕಾರಿಗಳು ಸಹಾಯದಿಂದ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಧ್ಯೇಯವಾಗಿದೆ.

ಗಾಂಧಿ ಭವನ :

ಆ.27ರ ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಕುಮಾರ ಕೃಪ ರಸ್ತೆ, ಗಾಂಧಿ ಭವನದಲ್ಲಿ ನಗರ ಪೊಲೀಸ್ ವತಿಯಿಂದ ಮಾಸಿಕ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net