ಹಳ್ಳದಲ್ಲಿ ಕೊಚ್ಚಿ ಹೋದರಾ ಪೊಲೀಸರು ?

IMG-20220906-WA0057.jpg
Published on

ಕೊಪ್ಪಳ: ಜಿಲ್ಲಾದ್ಯಂತ ಸೋಮವಾರ ತಡರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಇಬ್ಬರು ಪೊಲೀಸರು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯ ಮಹೇಶ ಹಾಗು ನಿಂಗಪ್ಪ ಎಂಬ ಪೇದೆಗಳಿಬ್ಬರು ನಿನ್ನೆ ಗಜೇಂದ್ರಗಡದಲ್ಲಿ ಬಂದೋಬಸ್ತಗೆ ಹೋಗಿದ್ದರು. ಸದ್ಯ ಅವರು ನಾಪತ್ತೆಯಾಗಿದ್ದು, ತೊಂಡಿಹಾಳ ಹಳ್ಳ ಪ್ರದೇಶದಲ್ಲಿ ಅವರ ಮೊಬೈಲ್ ಲೊಕೇಷನ್ ತೋರಿಸುತ್ತಿದೆ. ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ಕೊಚ್ಚಿ‌ ಹೋದರಾ ಎಂಬ ಶಂಕೆ ವ್ಯಕ್ತವಾಗಿದೆ. ಉಳಿದಂತೆ ಇಬ್ಬರ ಬಗ್ಗೆ ಯಾವ ಕುರುಹು ಪತ್ತೆಯಾಗುತ್ತಿಲ್ಲ.

ಹೀಗಾಗಿ ಅಗ್ನಿ ಶಾಮಕ ದಳದೊಂದಿಗೆ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಎಸಿ ಬಸವಣ್ಣಪ್ಪ ಕಲಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net