

ಮಂಗಳೂರು: ಮುಖ್ಯಮಂತ್ರಿ ಪದಕಕ್ಕೆ 2017-18ನೇ ಸಾಲಿನಲ್ಲಿ ಆಯ್ಕೆಯಾದ ಕರಾವಳಿಯ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಗೆ ನ.20ರಂದು ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪದಕ ಪ್ರದಾನ ಮಾಡಲಿದ್ದಾರೆ.
ಉಡುಪಿ ಎಸ್ಪಿ ವಿಷ್ಣುವರ್ಧನ, ಡಿವೈಎಸ್ಪಿ ಟಿ.ಆರ್.ಜೈ ಶಂಕರ್, ಪಶ್ಚಿಮ ವಲಯ ಐಜಿಪಿ ಕಚೇರಿಯ ಡಿವೈಎಸ್ಪಿ ಎ.ಸಿ.ಗೌರೀಶ್, ಕರಾವಳಿ ಕಾವಲು ಪಡೆಯ ಇನ್‌ಸ್ಪೆಕ್ಟರ್ ರವೀಶ್ ನಾಯಕ್, ಕುಂದಾಪುರ ಇನ್‌ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ, ಉಡುಪಿ ನಗರ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್, ಡಿಎಆರ್ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಜೆ., ಮಂಗಳೂರು ನಗರ ಸಿಸಿಬಿ ಎಎಸ್‌ಐ ಹರೀಶ್ ಪದವಿನಂಗಡಿ, ಹೆಡ್ ಕಾನ್‌ಸ್ಟೆಬಲ್ ಎನ್.ಎ.ಚಂದ್ರಶೇಖರ, ಉಳ್ಳಾಲ ಠಾಣೆ ಎಎಸ್‌ಐ ಎಂ.ಸುಂದರ, ಕಾವೂರು ಠಾಣೆ ಹೆಡ್ ಕಾನ್‌ಸ್ಟೆಬಲ್ ಕೆ.ಗೋಪಾಲಕೃಷ್ಣ, ಗುಪ್ತವಾರ್ತೆ ಹೆಡ್ ಕಾನ್‌ಸ್ಟೆಬಲ್ ರಶೀದ್ ಅಹಮದ್ ತಹಸೀಲ್ದಾರ್, ಬಂಟ್ವಾಳ ಠಾಣೆ ಹೆಡ್ ಕಾನ್‌ಸ್ಟೆಬಲ್ ಉದಯ ರೈ, ಸಿಎಆರ್ ಹೆಡ್ ಕಾನ್‌ಸ್ಟೆಬಲ್ ವರುಣ್ ಆಳ್ವ ಸೇರಿದಂತೆ ರಾಜ್ಯದ 243 ಮಂದಿ ಪೊಲೀಸರು ಸಿಎಂ ಪದಕ ಸ್ವೀಕರಿಸಲಿದ್ದಾರೆ.