

ಚಿಕ್ಕೋಡಿ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸಮುದಾಯ ಜನರ ಮೇಲೆ ನಡೆದ ಲಾಠಿಚಾರ್ಜ್ ಕ್ರಮ ಖಂಡಿಸಿ ಪಂಚಮಸಾಲಿ ಸಮುದಾಯದವರು ಹಾಗೂ ಸಮುದಾಯದ ವಕೀಲರು ಗುರುವಾರ ಚಿಕ್ಕೋಡಿಯ ಬಸವ ವೃತ್ತ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುವ ಮೂಲಕ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
2ಎ ಮೀಸಲಾತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುವ ದುರುದ್ದೇಶದಿಂದ ಲಾಠಿ ಚಾರ್ಜ್ ಮಾಡಿದೆ. ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ತನಿಖೆಗೆ ಒತ್ತಾಯಿಸಿ ವರಿಷ್ಠಾಧಿಕಾರಿಗಳನ್ನು ಅಮಾನತಿನಲ್ಲಿರಿಸಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಸುಭಾಷ ಯರನಾಳೆ, ಕಾರ್ಯದರ್ಶಿ ಎಸ್.ಆರ್.ವಾಲಿ, ಸಿ.ಬಿ.ಪಾಟೀಲ, ಬಿ.ಎನ್. ಪಾಟೀಲ, ವಿ.ಎಚ್.ಮಾದಪ್ಪಗೋಳ, ಎನ್.ಡಿ.ದರಬಾರೆ, ಡಿ.ಆರ್.ಕೊಟೆಪ್ಪಗೋಳ, ಎಂ.ಜಿ.ಮೋಟನ್ನವರ, ಎಂ.ಬಿ.ಬನ್ನಿ, ಚೇತನ ಪಚಂಡಿ, ಎ.ಎ.ಚೌಗಲಾ, ಎಂ.ಎಸ್.ಈಟಿ, ಅಶೋಕ ಹರಗಾಪುರೆ, ಎಸ್.ಆರ್.ಸಗರೆ, ಮಹಾದೇವ ಬೆಂಡವಾಡೆ ಇತರರಿದ್ದರು.