ವಿವಿಯಲ್ಲಿ ಪೊಲೀಸರ ತನಿಖೆ

Published on

ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯ ಹೊರಗುತ್ತಿಗೆ ನೌಕರ ಬಾಲಚಂದ್ರ ಮೀಟರ್ ಬಡ್ಡಿ ದಂಧೆಗೆ ಮನನೊಂದು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ತನಿಖೆ ನಡೆಸಿದರು.

ವಿಎಸ್‌ಕೆ ವಿವಿಗೆ ಆಗಮಿಸಿದ ವಾಡಿ ಪೊಲೀಸರು ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಪ್ರೊ. ಎಸ್.ಎನ್.ರುದ್ರೇಶ ಅವರಿಗೆ ಎಫ್‌ಐಆರ್ ಪ್ರತಿಯನ್ನು ನೀಡಿ ವಿಚಾರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪ್ರಕರಣದ ಆರೋಪಿಗಳು ಆಗಿರುವ ಪ್ರೊ.ಮೋಹನದಾಸ್ ಹಾಗೂ ಮೇರಿ ಎನ್ನುವವರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರು ಆಗುವಂತೆ ಸೂಚನೆ ನೀಡಿದ್ದಾರೆ.

ಏನಿದು ಘಟನೆ : ವಿವಿಯ ಪ್ರೊ.ಮೋಹನದಾಸ್ ಹಾಗೂ ಮೇರಿ ಎನ್ನುವವರು ತಮಗೆ ಹಣ ನೀಡುವಂತೆ ಕಿರುಕುಳ ನೀಡಿದ್ದರು ಎಂದು ಡೆತ್‌ನೋಟ್ ಬರೆದಿಟ್ಟಿದ್ದ ವಿವಿಯ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಇತ್ತೀಚೆಗೆ ಕಲಬುರಗಿ ರೈಲ್ವೇ ಸ್ಟೇಷನ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕಲಬುರಗಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರಣಿ ರಜೆ ಹಿನ್ನೆಲೆಯಲ್ಲಿ ತನಿಖೆ ವಿಳಂಬವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net