

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್, ಸಿಎಆರ್ ಸೇರಿದಂತೆ ರಾಜ್ಯದ ವಿವಿಧ ವಿಭಾಗಗಳ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ಕಳೆದ ತಿಂಗಳು ಇಲ್ಲಿನ ಶಿರೂರ ಪಾರ್ಕ್ನ ಮನೆಯೊಂದರಲ್ಲಿ ಪೊಲೀಸ್ ಸಿಬ್ಬಂದಿ ಜತೆ ಇಸ್ಪೀಟ್ ಜೂಜಾಡುತ್ತಿದ್ದ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಸಿಎಆರ್ ಆರ್ಪಿಐ ಸಂತೋಷ ಭೋಜಪ್ಪಗೋಳ ಸ್ಥಾನಕ್ಕೆ, ಹಾವೇರಿ ಡಿಎಆರ್ನಲ್ಲಿದ್ದ ಮಾರುತಿ ಹೆಗಡೆ ಅವರನ್ನು ನೇಮಿಸಲಾಗಿದೆ. ಸುದರ್ಶನ ಪಟ್ಟಣಕುಡೆ ಅಶೋಕನಗರ ಠಾಣೆಗೆ, ರಮೇಶ ಹೂಗಾರ ಕಮರಿಪೇಟೆ ಠಾಣೆಗೆ, ಬಿ.ಎ.ಜಾಧವ ಂಟಿಕೇರಿ ಠಾಣೆಗೆ, ಶಂಕರಗೌಡ ಬಸವನಗೌಡ ಧಾರವಾಡ ಉಪನಗರ ಠಾಣೆಗೆ ವರ್ಗಾವಣೆ ಮಾಡಿ ಇಲಾಖೆ ಆದೇಶಿಸಿದೆ.