ಕಳ್ಳತನಕ್ಕೆ ಯತ್ನ; ಸಾರ್ವಜನಿಕರಿಂದ ಥಳಿತ!

20240402_205136.jpg
Published on

ಬೆಳಗಾವಿ: ನಗರದಲ್ಲಿ ಮತ್ತೆ ಸಕ್ರಿಯವಾಗಿರುವ  ಕಳ್ಳರನ್ನು ಮಂಗಳವಾರ ರಾತ್ರಿ ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೇಂದ್ರ ಬಸ್ ನಿಲ್ದಾಣದಿಂದ ಖಾಸಗಿ ಕಂಪನಿಯ ನೌಕರನೊಬ್ಬನು ಬಾಜಿ ಮಾರ್ಕೆಟ ರಸ್ತೆಯ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್ ಮೇಲೆ ಬಂದ ಕಳ್ಳರು ಅಡ್ಡಗಟ್ಟಿ ಮೊಬೈಲ್, ಇನ್ನಿತರ ವಸ್ತುಗಳನ್ನು ಕಸಿದುಕೊಂಡು ಹೋಗಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಈ ವೇಳೆ ಜತೆಯಲ್ಲಿ ಇನ್ನಿಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಕಳ್ಳನನ್ನು , ಬೈಕ್ ವಶಕ್ಕೆ ಪಡೆದುಕೊಂಡರು. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net