ಕಳಪೆ ಊಟ, ಉಪಹಾರ; ಕಣೀರಿಟ್ಟ ಪೊಲೀಸರು

20231206_140123.jpg
Published on


ಬೆಳಗಾವಿ:ಚಳಿಗಾಲ ಅಧಿವೇಶನ ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಪೊಲೀಸ್ ಅಧಿಕಾರಿಗಳು, ಕಾನ್ಸ್ ಟೇಬಲ್ ಗಳು ಕಳಪೆ, ಆಹಾರ, ಉಪಹಾರ ಸೇವಿಸಿ ಕಣ್ಣೀರು ಹಾಕಿರುವ ಘಟನೆ ಬುಧವಾರ ಪೊಲೀಸ್ ಟೆಂಟ್, ಪ್ರತಿಭಟನಾ ಸ್ಥಳದಲ್ಲಿ ನಡೆಯಿತು.
ಕಳೆದು ಎರಡು ದಿನಗಳಿಂದ ಸರಿಯಾಗಿ ಊಟ ಸಿಗುತ್ತಿಲ್ಲ. ಅರ್ಧ ಹೊಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬುಧವಾರ ಮಧ್ಯಾಹ್ನ ಅಸಿಬಿಸಿ ಪಲ್ಲೇ, ಅನ್ನ, ಸಾಂಬರು, ರಾತ್ರಿ  ಉಳಿದಿರುವ ಅನ್ನವೇ ಪೊಲೀಸರಿಗೆ ಬೆಳಗಿನ ಉಪಹಾರ. ಸಕ್ಕರೆ ಕಾಯಿಲೆ, ಹೃದಯರೋಗಕ್ಕೆ‌ಒಳಗಾಗಿರುವ ಪೊಲೀಸರು ಹೇಗೆ ಊಟ ಮಾಡಬೇಕು. ಈ ಕಳಪೆ ಆಹಾರದಿಂದ ನಾವ್ಯಾರು ಸರಿಯಾಗಿ ಊಟವಿಲ್ಲದೆ ಆರೋಗ್ಯ ಸಮಸ್ಯೆ ಎದುತಿಸುತ್ತಿದ್ದೇವೆ. ಹಿರಿಯ ಅಧಿಕಾರಿಗಳು ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಪೊಲೀಸರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net