ಕಿಡ್ನಾಪರ್  ಪತ್ತೆಗೆ ಪೊಲೀಸ್ ತಂಡ ರಚನೆ;ಐಜಿಪಿ ವಿಕಾಸ ಕುಮಾರ ಮಾಹಿತಿ

Screenshot_20230712_160000_Editor-Lite.jpg
Published on


ಬೆಳಗಾವಿ: ನಗರದ ಟಿಳಕವಾಡಿಯಲ್ಲಿ ಬಾಲಕಿ ಕಿಡ್ನಾಪ್‌ಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೋಧಗಾಗಿ ಒಂದು ತಂಡ ರಚನೆ ಮಾಡಲಾಗಿದೆ ಎಂದು ಪ್ರಭಾರಿ ಪೊಲೀಸ್ ಆಯುಕ್ತ,ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಕಿಡ್ನಾಪ್‌ಗೆ ಯತ್ನ ಘಟನೆ ನಡೆದಿದೆ.
ಹತ್ತು ವರ್ಷದ ಬಾಲಕಿಗೆ ಕಿಡ್ನಾಪ್ ಮಾಡುವ ಘಟನೆ ನಡೆದಿದೆ.ಆ ಬಾಲಕಿ ವಿರೋಧಿಸಿ, ಕಿರುಚಾಡಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ.ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗಲೇ ಒಂದು ಟೀಮ್ ಮಾಡಿ ಆರೋಪಿ ಶೋಧ ಮಾಡುತ್ತಿದ್ದೇವೆ‌.
ಆರೋಪಿಯ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net