

ಬ್ಯಾಡಗಿ: ಕಂಟೆನರ್ ಲಾರಿಯಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸರು ಲಾರಿಯಲ್ಲಿದ್ದ 20 ಎತ್ತು ಹಾಗೂ 5 ಎಮ್ಮೆಗಳನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಛತ್ರ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಜಾರಶರೀಫ್ ಅಮೀರಜಾನ್, ಕಾಸರಗೂಡು ತಾಲೂಕಿನ ಸುಕುಮಾರ ಶುಕ್ರ ಹಾಗೂ ರಾಣೆಬೆನ್ನೂರಿನ ಪಂಪಣ್ಣ ಹೊನ್ನಾಳಿ ಬಂಧಿತ ಆರೋಪಿಗಳು.
ಇವರು ಕಂಟೆನರ್ ಲಾರಿಯಲ್ಲಿ ಅಕ್ರಮವಾಗಿ ಎತ್ತು ಹಾಗೂ ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಎತ್ತು ಹಾಗೂ ಎಮ್ಮೆಗಳನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.