ಲಾಠಿಗೂ ಸೈ... ಹಾರೆಗೂ ಸೈ... ಸುಗಮ ಸಂಚಾರಕ್ಕೆ ರಸ್ತೆ ಸರಿಪಡಿಸಿದ ಪೊಲೀಸರು

IMG-20210625-WA0009
Published on

ಮಂಗಳೂರು: ಪೊಲೀಸರು ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆಯನ್ನು ಸ್ವತಃ ಹಾರೆ ಹಿಡಿದು ಸರಿಪಡಿಸಿದರು.

ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಇದು ನಗರದ ಪ್ರಮುಖ ರಸ್ತೆಯಾದ ಕಾರಣ ವಾಹನ ಸಂಚಾರ ಹೆಚ್ಚಾಗಿದೆ. ಲಾಕ್ ಡೌನ್ ವಿನಾಯಿತಿ ಅವಧಿಯಲ್ಲಿ ವಾಹನ ದಟ್ಟಣೆ ಕಂಡು ಬಂದಿದೆ. ನಗರ ಪಾಲಿಕೆಗೆ ಸರಿಪಡಿಸಿ ಕೊಡಲು ಹೇಳಿದಾಗ ಅವರು ಸೂಕ್ತ ಸ್ಪಂದನೆ ನೀಡದ ಕಾರಣ ಪೊಲೀಸರೇ ಹಾರೆ ಹಿಡಿದು ಸರಿಪಡಿಸಿದರು.

ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಮತ್ತು ಕಾನ್ ಸ್ಟೇಬಲ್ ಅಹ್ಮದ್ ಬಶೀರ್ ಅವರು ಶುಕ್ರವಾರ ರಸ್ತೆ ಸರಿಪಡಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net