ದಿನಕ್ಕೆರಡು ಬಾರಿ ಆರೋಗ್ಯ ತಪಾಸಣೆ

31-03kodekal01
Published on

ಕೊಡೇಕಲ್: ಮಹಾರಾಷ್ಟ್ರ, ಗೋವಾ, ಮಂಗಳೂರ ಮತ್ತು ಹೈದರಾಬಾದ್ ನಗರಗಳಿಗೆ ವಲಸೆ ಹೋಗಿ ಕರೊನಾ ಭೀತಿಯಿಂದ ಮರಳಿ ಗ್ರಾಮಕ್ಕೆ ಬಂದಿರುವ ಸುಮಾರು 56 ಜನರಿಗೆ ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ ಎಂದು ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಪವನರಾವ ತಿಳಿಸಿದ್ದಾರೆ.

ಅಲ್ಲದೆ ದಿನಕ್ಕೆರಡು ಬಾರಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಕೊಡೇಕಲ್ ಸಮೀಪದ ಹಗರಟಗಿ ಗ್ರಾಮದದಿಂದ ಕೂಲಿ ಮಾಡಲು ಮಹಾರಾಷ್ಟ್ರ, ಗೋವಾ, ಮಂಗಳೂರ ಮತ್ತು ಹೈದರಾಬಾದ್ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದ ಜನರು ಮರಳಿ ಗ್ರಾಮಗಳಿಗೆ ವಾಪಾಸಾಗುತ್ತಿದ್ದವರ ಮೇಲೆ ಆರೋಗ್ಯ ಇಲಾಖೆ ತಪಾಸಣೆ ಮಾಡಿದ್ದು, ಅವರಿಗೆ ಯಾವ ರೋಗದ ಲಕ್ಷಣವಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ 14 ದಿನಗಳ ಕಾಲ ಮನೆಯಲ್ಲಿಯೆ ಇರಿ ಹೊರಗಡೆ ಒಡಾಡಬೇಡಿ ಎಂದು ಹೇಳಲಾಗಿದೆ.

ಚೆಕ್ಪೋಸ್ನಲ್ಲಿ ಬಿಗಿ ಬಂದೋಬಸ್ತ್: ಹುಣಸಗಿ ತಾಲೂಕಿನ ಗಡಿ ಗ್ರಾಮವಾಗಿರುವ ಹಗರಟಗಿ ಗ್ರಾಮದಲ್ಲಿ ನಾರಾಯಣಪುರ ಪೊಲೀಸ್ ಠಾಣೆಯಿಂದ ಚೆಕ್ಪೋಸ್ಟ್ ತೆರೆಯಲಾಗಿದ್ದು, ಲಾಕಡೌನ ಸಂದರ್ಭದಲ್ಲಿ ಈ ಮಾರ್ಗದಿಂದ ಸಂಚಾರಿಸುವ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕ ಮುಜಾಹಿದ್ದಿನ್ ನಮಾಜಕಟ್ಟಿ, ಅರಕ್ಷಕರಾದ ವಿನಾಯಕ ಹೋನವಾಡ, ಸೋಮನಾಥ, ಮಹಬೂಬ ಮೂಲಿಮನಿ, ರಾಜ ರಾಠೋಡ್, ಆಶಾ ಕಾರ್ಯಕತರ್ೆಯರಾದ ಸುಮಾ ಪಾಟೀಲ ಮತ್ತು ಪದ್ಮಾವತಿ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net