ರಾಜ್ಯದಲ್ಲಿ ಪೊಲೀಸ್​ ಗುಂಡಾ ಆಡಳಿತ

vijayavani logo
Police gangster rule in the state
Published on

ವಿಜಯಪುರ: ಕರ್ನಾಟಕದಲ್ಲಿ ಸದ್ಯ ಪೊಲೀಸ್​ ಗುಂಡಾ ಆಡಳಿತ ಜಾರಿಯಲ್ಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್​. ಪಾಟೀಲ ನಡಹಳ್ಳಿ ಆರೋಪಿಸಿದರು.

ಸಂವಿಧಾನ ಬದ್ಧವಾಗಿರುವ ಪ್ರತಿಭಟನೆಯ ಹಕ್ಕನ್ನೇ ರಾಜ್ಯ ಕಾಂಗ್ರೆಸ್​ ಸರ್ಕಾರ ಕಿತ್ತುಕೊಂಡಿದೆ. ಪೊಲೀಸರ ಮೂಲಕ ದಬ್ಬಾಳಿಕೆ ಮೆರೆಯುತ್ತಿದೆ ಎಂಬುದಕ್ಕೆ ಮುದ್ದೇಬಿಹಾಳದ ಪಿಎಸ್​ಐಗಿಂತ ದೊಡ್ಡ ಸಾಕ್ಷಿ ಮತ್ತೊಂದಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

ಚಾಮರಾಜಪೇಟೆಯಲ್ಲಿ ನಡೆದ ಗೋಮಾತೆಯ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕ್ರಮಣದ ದಿನದಂದು ಬಿಜೆಪಿ ಕಾರ್ಯಕರ್ತರು ಮುದ್ದೇಬಿಹಾಳ ಶಾಸಕ ಎ.ಎಸ್​. ಪಾಟೀಲ ನಡಹಳ್ಳಿ ಮನೆಗೆ ಸೆಗಣಿ ಬಳಿದು ಹೋರಾಟ ನಡೆಸಿದರು.

ಸೆಗಣಿಯಿಂದ ಮನೆ ಸಾರಿಸುವ ಹಿಂದುಗಳ ಸಂಸತಿಯ ಅರಿವು ಮೂಡಿಸುವ ಉದ್ದೇಶ ಕಾರ್ಯಕರ್ತರದ್ದಾಗಿತ್ತು. ಆದರೆ, ಹಾಗೆ ಸೆಗಣಿ ಬಳಿದು ಹೋರಾಟ ನಡೆಸಿದ ಬಿಜೆಪಿ ಪದಾಧಿಕಾರಿಗಳ ಮೇಲೆ ಕ್ರಮಿನಲ್​ ಮೊಕದ್ದಮೆ ದಾಖಲಿಸಿದೆ. ಆ ಮೂಲಕ ಗುಂಡಾ ಪ್ರವೃತ್ತಿ ಮೆರೆದಿದೆ ಎಂದರು.

ಪೊಲೀಸರು ನಮ್ಮ ಕಾರ್ಯಕರ್ತರಿಗೆ ಶರ್ಟ್​ ಕಾಲರ್​ ಹಿಡಿದು ಹೊಡೆದಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಮುದ್ದೇಬಿಹಾಳ ಪಿಎಸ್​ಐ ತಿಪ್ಪಾರೆಡ್ಡಿ ನನ್ನ ಮೇಲೆ ಏರಿ ಬಂದಿದ್ದಾನೆ. ಇನ್ಸ್​ಪೆಕ್ಟರ್​ ತುಳಸಿಗಿರಿ ಸಹ ಸರ್ಕಾರದ ಅಡಿಯಾಳಾಗಿ, ಕಾಂಗ್ರೆಸ್​ ಏಜೆಂಟ್​ ಥರ ನಡೆದುಕೊಂಡರು ಎಂದು ಆರೋಪ ಮಾಡಿದರು. ಅಲ್ಲದೇ, ಪೊಲೀಸರ ಈ ವರ್ತನೆ ಖಂಡಿಸಿ ಹೋರಾಟ ಹಮ್ಮಿಕೊಳ್ಳುವುದಾಗಿ ನಡಹಳ್ಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net