ಸರಳಗಳ್ಳನ ಬಂಧನ, ಆಭರಣ ವಶ

16GDG05
Published on

ಗದಗ: ಬೆಟಗೇರಿ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಬಾಲ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ 80 ಸಾವಿರ ಮೌಲ್ಯದ ಚಿನ್ನದ ಮಾಂಗಲ್ಯ ಸರ, 20 ಸಾವಿರ ಮೌಲ್ಯದ ಚಿನ್ನದ ಸರ, 50 ಸಾವಿರ ಮೌಲ್ಯದ ಚಿನ್ನದ ಲಾಕೇಟ್​, ಸೇರಿ ಒಟ್ಟು ಅಂದಾಜು 1.50 ಲಕ್ಷಕ್ಕೂ ಅಧಿಕ ಚಿನ್ನಾಭರಣಗಳನ್ನು ಹಾಗೂ ಒಂದು ಬೈನ್​ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಪರಾರಿ ಆಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮುಂಬೈನ ಮುಬ್ರಾ ಹಾಗೂ ಆಂಧ್ರಪ್ರದೇಶದ ಗುಂತಕಲ್ ನಿವಾಸಿಗಳಾದ ಆರೋಪಿಗಳು, ಬೆಳಗ್ಗೆ ರಂಗೋಲಿ ಬಿಡಿಸುವ ಮಹಿಳೆಯರಿಗೆ ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿನ ಮಾಂಗಲ್ಯ ಸರ ಮತ್ತು ಚೈನ್​ ಗಳನ್ನು ಕಿತ್ತುಕೊಂಡು ಪರಾರಿ ಆಗುತ್ತಿದ್ದರು. ಕಳ್ಳತನ ನಡೆಸಲು ಧಾರವಾಡದ ವಿದ್ಯಾಗನಗರದಿಂದ ಬೈಕ್​ ಕಳ್ಳತನ ಮಾಡಿಕೊಂಡು ಗದಗ ನಗರಕ್ಕೆ ಬಂದಿದ್ದರು. ಕಳ್ಳತನ ನಂತರ ನಗರದ ಹಾತಲಗೇರಿ ನಾಕಾ ಬಳಿಯ ಜೆ.ಟಿ. ಇಂಜಿನಿಯರಿಂಗ್​ ಕಾಲೇಜು ಬಳಿ ಬೈಕ್​ ಬಿಟ್ಟು ಪರಾರಿ ಆಗಿದ್ದರು ಎಂದು ಪೊಲೀಸ ಮೂಲಗಳು ತಿಳಿಸಿದೆ. ಬಂದಿತ ಆರೋಪಿಯ ಮೇಲೆ ಸೆಕ್ಷನ್​ 392 ಕಲಂ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್​ ಅಧಿಕಾರಿಗಳಾದ ಜೆ. ಎಚ್​. ಇನಾಮದಾರ್​, ಧಿರಜ್​ ಶಿಂಧೆ, ಸಂಗಮೇಶ ಶಿವಯೋಗಿ, ನೂರಜಾನ ಸಾಬರ, ಎಸ್​.ಬಿ. ಜಾಂಬೋಟಿ, ಬಿ.ಎ್​ ಯರಗುಪ್ಪಿ ಸೇರಿದಂತೆ ಇತರರು ಪ್ರಕರಣ ಭೇದಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net