

ಪೊಲೀಸ್ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಗದಗ
ದೀಪವು ನಿನ್ನದೇ.. ಗಾಳಿಯು ನಿನ್ನದೇ.. ಆರದಿರಲಿ ಬೆಳಕು…. ಸಾಹಿತ್ಯವು ನಗರದ ಭೀಮಸೇನ ಜೋಶಿ ರಂಗ ಮಂದಿರವನ್ನು ಕೆಲಹೊತ್ತು ಮೌನವಾಗಿಸಿತ್ತು..
ಪೊಲೀಸ್ ಇಲಾಖೆಯಿಂದ ಗುರುವಾರ ಸಂಜೆ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪರಮಪದ ಸಾಂಸ್ಕೃತಿಕ ತಂಡವು ನೀಡಿದ ಸಾಹಿತ್ಯ ಮಂಜರಿಯ ಝಲಕ್ ಇದಾಗಿತ್ತು.. ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳನ್ನು ಕೆಲಹೊತ್ತು ಮೂಕವಿಸ್ಮಿತ ಆಗುವಂತೆ ಪರಮದ ತಂಡವು ಸಾಹಿತ್ಯದ ರಸದೌತಣ ಬಡಸಿತು.
ಕನ್ನಡ ಬೆಳ್ಳಿಪರದೆಯ ಹೆಸರಾಂತ ದಾರವಾಹಿ ಮುಕ್ತಾ ಮುಕ್ತಾ ಪೀಠಿಕೆ ಸಾಹಿತ್ಯದ ಗಾಯನಕ್ಕೆ ಚಪ್ಪಾಳೆ ಸುರಿಮಳೆಗೈದವು.
ಇನ್ನೂ, ಜೈ ಹೋ…, ಮಿಟ್ಟಿ ಮೇ ಮಿಲ ಜಾವಾ…, ವಂದೇ ಮಾತರಂ, ಕನ್ನಡ ಗೀತೆಗಳಿಂದ ಸಂಡೇ ಬ್ಯಾಂಡ್ ರಂಜಿಸಿತು.
ಸಚಿವ ಎಚ್.ಕೆ. ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಇತರರು ಇದ್ದರು