ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸï ಧ್ವಜ ದಿನಾಚರಣೆ ಪೊಲೀಸ ಧ್ವಜ ದಿನಾಚರಣೆ ಇದೊಂದು ಅವಿಸ್ಮರಣೀಯ ದಿನ: ಐಜಿಪಿ

RAICHUR
RAICHUR
Published on

 ರಾಯಚೂರು ಪೊಲೀಸ್ ಕಾಯ್ದೆಯ ಪ್ರಾರಂಭೋತ್ಸವವನ್ನು ಪೊಲೀಸ ಧ್ವಜ ದಿನಾಚರನೆಯನ್ನಾಗಿ ಆಚರಿಸಲಾಗುತ್ತಿದ್ದು, ಇದೊಂದು ಅವಿಸ್ಮರಣೀಯ ದಿನವಾಗಿದೆ ಎಂದು ಬಳ್ಳಾರಿ ವಲಯದ ಪೊಲೀಸï ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ ಕುಮಾರ ಅವರು ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿ¯್ಲÁ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸï ಧ್ವಜ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ೨೨ ವರ್ಷಗಳ ಹಿಂದೆ ರಾಯಚೂರಿನಲ್ಲಿ ಹೆಚ್ಚುವರಿ ಪೊಲೀಸ್ ಅಽÃಕ್ಷಕನಾಗಿ ಕೆಲಸ ಮಾಡಿದ್ದು, ಇಂದು ವೃತ್ತಿ ಜೀವನದ ಕೊನೆಯ ಪೊಲೀಸ್ ಧ್ವಜ ದಿನಾಚರಣೆಯನ್ನು ರಾಯಚೂರಿನಲ್ಲಿಯೇ ಆಚರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಇಲಾಖೆಯಲ್ಲಿ ಸಾಧನೆ ಮಾಡಿದ ಪೊಲೀಸ್ ಅಽಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೆನೆಯುವ ಸಂಭ್ರಮದ ಕಾರ್ಯಕ್ರಮ ಇದಾಗಿದೆ ಎಂದರು.

ಎಸ್ಪಿ ಎಂ.ಪುಟ್ಟ ಮಾದಯ್ಯ ಮಾತನಾಡಿ, ಪೊಲೀಸ್ ಕಲ್ಯಾಣ ನಿಽಯನ್ನು ಸ್ಥಾಪಿಸಿ ವಿಶ್ರಾಂತ ಪಡೆದ ಪೊಲೀಸ್ ಅಽಕಾರಿ ಹಾಗೂ ಸಿಬ್ಬಂದಿಗಳಿಗೆ ಅರೋಗ್ಯ ಭಾಗ್ಯದ ಅಡಿಯಲ್ಲಿ ೧,೧೨೦ ಮಂದಿಗೆ ಸೌಲಭ್ಯವನ್ನು ಒದಗಿಸಲಾಗಿದ್ದು, ಒಟ್ಟು ೪.೭೦ ಲಕ್ಷ ರೂ.ಗಳ ಹಣವನ್ನು ಖರ್ಚು ಮಾಡಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಆರಕ್ಷಕ ನಿರೀಕ್ಷಕರಾದ ಹಸನ ಸಾಬï ಅವರು ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಕೇವಲ ದಿನಾಚರಣೆ ಅಲ್ಲ. ಇದು ರಾಜ್ಯದ ಪೊಲೀಸï ಸಿಬ್ಬಂದಿಯ ತ್ಯಾಗ, ಬದ್ಧತೆ ಹಾಗೂ ಸಾಧನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಎಂದರು.

ನಂತರ ಪೊಲೀಸï ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ೭೦ ವರ್ಷ ಮೇಲ್ಪಟ್ಟ ಸುಮಾರು ೩೫ ವಿವಿಧ ಅಽಕಾರಿ ಮತ್ತು ಸಿಬ್ಬಂದಿಗಳಿಗೆ ಈ ವೇಳೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿ¯್ಲÁ ಪೊಲೀಸï ವರಿಷ್ಠಾಽಕಾರಿ ಜಿ.ಹರೀಶ, ಡಿಎಸ್‌ಪಿ ದತ್ತಾತ್ರೇಯ ಕಾರ್ನಾಡ್, ಶಾಂತಮೂರ್ತಿ,ಉಮೇಶï ಕಾಂಬ್ಲೆ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net