ವಾರದವರೆಗೆ ಪೊಲೀಸ್ ಫಿಟ್ನೆಸ್ ವಿಸ್ತರಣೆ

shashikumar
Published on

ಹುಬ್ಬಳ್ಳಿ: ಪೊಲೀಸರಿಗೆ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ತರಬೇತಿ ಮತ್ತು ಕಾರ್ಯಾಗಾರ ತಿಂಗಳವರೆಗೆ ಏರ್ಪಡಿಸಲಾಗಿದೆ. ಈಗ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೂ ಒಂದು ವಾರದವರೆಗೆ ವಿಸ್ತರಿಸಲಾಗುವುದು ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪೊಲೀಸರು ಫಿಟೆನೆಸ್ ಕಾಯ್ದುಕೊಳ್ಳುವುದಿಲ್ಲ ಎಂಬ ಆರೋಪವಿದೆ. ಇದನ್ನು ಹೋಗಲಾಡಿಸುವ ಸಂಬಂಧ 4 ವಾರದಿಂದ ಫಿಟ್‌ನೆಸ್ ಕಾರ್ಯಾಗಾರ ನಡೆಯುತ್ತಿದೆ. 90 ಕೆಜಿ ಮೇಲ್ಪಟ್ಟ ಪುರುಷ ಸಿಬ್ಬಂದಿ, 70 ವರ್ಷ ಮೇಲ್ಪಟ್ಟ ಮಹಿಳಾ ಸಿಬ್ಬಂದಿ ಸೇರಿ 65 ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. 4ರಿಂದ 11 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ನಿತ್ಯ ಯೋಗ, ವಾಕಿಂಗ್, ಡ್ರಿಲ್, ಸ್ಟ್ರೆಚಿಂಗ್, ಮೆಡಿಟೇಷನ್ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net