ಅಪರಾತ್ರಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ ಮೆಚ್ಚುಗೆ ಗಳಿಸಿದ ಪೊಲೀಸ್‌

WhatsApp Image 2021-04-26 at 12.16.46 PM
Published on

ಮಂಗಳೂರು: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರು ಕೈಕೊಟ್ಟಾಗ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ತಲಪಿಸಿದ್ದು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಹಿಳೆ ಭಾನುವಾರ ರಾತ್ರಿ ಗಂಡುಮಗುವಿಗೆ ಜನ್ಮನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಏ.೨೩ರಂದು ರಾತ್ರಿ ಗುರುವಾಯನಕೆರೆಯ ಸಿದ್ದಿಕ್‌ ಎಂಬವರು ಆಲ್ಟೊ ಕಾರಿನಲ್ಲಿ ತಮ್ಮ ಗರ್ಭಿಣಿ ಪತ್ನಿ ಶಾಹಿದಾ ಬಾನು ಜೊತೆಗೆ ನಗರದ ಎ.ಜೆ.ಆಸ್ಪತ್ರೆಗೆ ಹೆರಿಗೆಗೆಂದು ತೆರಳುತ್ತಿದ್ದರು. ಆಗ ಕಾರು ಕೆಟ್ಟು ನಿಂತಿದೆ. ಅಸಹಾಯಕರಾಗಿದ್ದ ಸಿದ್ದಿಕ್‌ ಹಾಗೂ ಅವರ ಪತ್ನಿಯನ್ನು ಅಲ್ಲಿ ಗಸ್ತು ನಿರತರಾಗಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ಎಎಸ್‌ಐ ಹರೀಶ್‌ ಮತ್ತು ಪಿಸಿ ವಿಜಯ್‌ ಕುಮಾರ್‌ ಅವರು ಗಸ್ತು ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net