ಪೊಲೀಸ್​ ವೃತ್ತಿಪರತೆಯಿಂದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಳ

udp-21-police
Published on

ಉಡುಪಿ: ವೃತ್ತಿಯಲ್ಲಿ ಕೌಶಲ ಅತೀ ಅಗತ್ಯವಾಗಿದ್ದು, ಪೊಲೀಸರ ವೃತ್ತಿಪರ ತನಿಖೆಗೆ ಕಾರ್ಯಾಗಾರಗಳು ಬಹಳಷ್ಟು ಸಹಕಾರಿಯಾಗುತ್ತವೆ. ವೈಜ್ಞಾನಿಕ ಸಾ ಸಂಗ್ರಹದಿಂದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವೂ ಹೆಚ್ಚಳವಾಗಲಿದೆ ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್​ ಉಪ ಮಹಾನಿರೀಕ್ಷಕ ಅಮಿತ್​ ಸಿಂಗ್​ ಹೇಳಿದರು.

ಶನಿವಾರ ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ 6ನೇ ಪೊಲೀಸ್​ ಕರ್ತವ್ಯ ಕೂಟ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಐಜಿಪಿಯವರು ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಘೋಷಿಸಿದರು.

ಮಾಹೆಯ ಸಿಒಒ ಡಾ. ರವಿರಾಜ್​ ಎನ್​.ಎಸ್​.ಮಾತನಾಡಿ, ಪೊಲೀಸರು ಕಾನೂನು ಪಾಲನೆ ಮಾಡುವ ಜತೆಗೆ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಗಮನಹರಿಸಬೇಕು. ಮಾಹೆ ಕೌಶಲ್ಯಾಭಿವೃದ್ಧಿ ಕೇಂದ್ರ ವತಿಯಿಂದ ಪೊಲೀಸರಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಕೆ.ಅರುಣ್​ ಮಾತನಾಡಿದರು. ಮಂಗಳೂರು ವಲಯದ ಅಭಿಯೋಜನ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್​ ಆಳ್ವ ಕೆ., ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಪಿ.ಎ.ಹೆಗಡೆ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎಸ್​.ಟಿ.ಸಿದ್ದಲಿಂಗಪ್ಪ ಸ್ವಾಗತಿಸಿದರು. ಪಶ್ಚಿಮ ವಲಯ ಎಫ್​ಪಿಬಿ ಡಿವೈಎಸ್​ಪಿ ಗೌರೀಶ್​ ವಂದಿಸಿದರು. ಪೊಲೀಸ್​ ಸಿಬಂದಿ ಶಿವಾನಂದ ನಾಯರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net