3 ಲಕ್ಷ ರೂ. ಮೌಲ್ಯದ ಮಾದಕವಸ್ತು ನಾಶ

Screenshot_20220626-153911_Adobe Acrobat
Published on

ಉಡುಪಿ:  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  19  ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 3,27,135 ರೂ. ಮೌಲ್ಯದ ಮಾದಕ ವಸ್ತುಗಳನ್ನು ಭಾನುವಾರ ಉಡುಪಿ ಪೋಲಿಸ್ ವರಿಷ್ಠಾಧಿಕಾರಿ  ಎನ್.ವಿಷ್ಣುವರ್ಧನ್ ಉಪಸ್ಥಿತಿಯಲ್ಲಿ  ಪೊಲೀಸರು ನಾಶಪಡಿಸಿದರು.

2,72,135 ರೂ ಮೌಲ್ಯದ 9 ಕೆಜಿ 686 ಗ್ರಾಂ ಗಾಂಜಾ, 55,000 ರೂ ಮೌಲ್ಯದ 410 ಗ್ರಾಂ ಚರಸ್ ಅನ್ನು ಪಡುಬಿದ್ರೆ ಠಾಣಾ ವ್ಯಾಪ್ತಿಯ ನಂದಿಕೂರು ಕೈಗಾರಿಕ ಪ್ರದೇಶದಲ್ಲಿ ನಾಶ ಪಡಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ  ಸುಧಾಕರ್ ನಾಯ್ಕ್, ಕಾರ್ಕಳ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್, ಸಿ.ಇ.ಎನ್ ಪೋಲಿಸ್ ನಿರೀಕ್ಷಕ ಮಂಜುನಾಥ್, ಕಾಪು ವೃತ್ತನಿರೀಕ್ಷಕ ಪ್ರಕಾಶ್‌, ಮಣಿಪಾಲ ಪಿ.ಎಸ್.ಐ ಸುಧಾಕರ ತೋನ್ಸೆ, ಕೋಟ ಪಿ.ಎಸ್.ಐ ಮಧು ಬಿ.ಇ. ಕಾಪು ಠಾಣೆ ಭರತೇಶ್, ಗಂಗೊಳ್ಳಿ ಠಾಣೆಯ ವಿನಯ್‌ ಕೊರ್ಲಹಳ್ಳಿ, ಮಲ್ಪೆ ಠಾಣೆಯ ಸಕ್ತಿವೇಲು, ಪಡುಬಿದ್ರೆ ಠಾಣೆಯ ಪುರುಷೋತ್ತಮ, ಮಹೇಶ್, ಡಿ.ಸಿ.ಆರ್.ಬಿ ಎ.ಎಸ್.ಐ ಪ್ರಕಾಶ್ ಹಾಗು ಆಯುಷ್ ಸಂಸ್ಥೆಯ ಸತೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net