ಯುವಜನತೆ ಸಂವಿಧಾನ ಅಧ್ಯಯನ ಮಾಡಲಿ

Untitled design(18)
ದೇವದುರ್ಗದಲ್ಲಿ ಆಯೋಜಿಸಿದ್ದ ಯುವಕರ ಸಭೆಯಲ್ಲಿ ಡಿವೈಎಸ್ಪಿ ಎಸ್.ಶಿವಕುಮಾರಗೆ ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು. ಪಿಐ ಕೆ.ಹೊಸಕೇರಪ್ಪ, ಪಿಎಸ್‌ಐ ಕರೆಮ್ಮ, ಉಪನ್ಯಾಕಸರಾದ ವಿನೋದ್‌ಕುಮಾರ, ರಾಜಶೇಖರ, ಅನ್ನಪೂರ್ಣ ಇದ್ದರು.
Published on

ದೇವದುರ್ಗ: ಕಾನೂನಿನ ಅರಿವಿದ್ದರೇ ಯಾರೂ ಅಪರಾಧ ಮಾಡುವುದಿಲ್ಲ. ಸಾಮಾಜಿಕ ಸ್ವಾಸ್ತ್ಯ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಡಿವೈಎಸ್‌ಪಿ ಎಸ್.ಶಿವಕುಮಾರ ಹೇಳಿದರು.

ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಯುವಕರ ಸಭೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ

ಯುವಜನತೆಗೆ ಕಾನೂನು ಅರಿವು ಹಾಗೂ ದುಶ್ಚಟಗಳ ದುಷ್ಪರಿಣಾಮ ಜಾಗೃತಿ ಮೂಡಿಸಲಾಗುತ್ತಿದೆ. ಯುವಜನತೆ ಸಂವಿಧಾನದಲ್ಲಿನ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಮಾದಕ ವಸ್ತುಗಳ ಸೇವನೆಯಿಂದ ಜೀವನ ಹಾಳಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದರು.

ಪಿಐ ಕೆ.ಹೊಸಕೇರಪ್ಪ ಮಾತನಾಡಿದರು. ಪಿಎಸ್‌ಐ ಕರೆಮ್ಮ, ಉಪನ್ಯಾಸಕರಾದ ವಿನೋದ್‌ಕುಮಾರ ನಾಯಕ, ರಾಜಶೇಖರ, ಚನ್ನಪ್ಪ ಪವರ್, ಶಿವರಾಜ, ಮಲ್ಲಿಕಾರ್ಜುನ, ಅನ್ನಪೂರ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net