

ಹಟ್ಟಿಚಿನ್ನದಗಣಿ: ಯುವಕರನ್ನು ದಿಕ್ಕುತಪ್ಪಿಸಿ ಭವಿಷ್ಯ ಹಾಳು ಮಾಡುವ ದುಷ್ಟಶಕ್ತಿಗಳು ಸಕ್ರಿಯವಾಗಿವೆ. ಕಾನೂನು ಅರಿವು ಪಡೆದು ಜಾಗರೂಕತೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹಟ್ಟಿ ಠಾಣೆ ಸಿಪಿಐ ಪ್ರಕಾಶ್ ಎಲ್.ಮಾಳಿ ಹೇಳಿದರು.
ಪಟ್ಟಣದ ಶರಣಬಸವೇಶ್ವರ ಬಾಲಕಿಯರ ಪಪೂ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಯುವಕರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಓದಿ ಭವಿಷ್ಯ ರೂಪಿಸಿಕೊಳ್ಳುವ ಹೊತ್ತಿನಲ್ಲಿ ಮದುವೆ ಆಸೆ ತೋರಿಸಿ ಹೆಣ್ಣುಮಕ್ಕಳ ಜೀವನ ಹಾಳು ಮಾಡುತ್ತಿರುವುದು ನಡೆದಿದೆ. ಇಂಥ ಕೃತ್ಯಗಳಿಂದ ಎಚ್ಚರಿಕೆ ಅಗತ್ಯ. ಮಕ್ಕಳು ಸೇವಿಸುವ ತಿನಿಸುಗಳ ಮೂಲಕ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾ ಬಳಸುವಲ್ಲಿ ಬಾಲಕಿಯರು ಎಚ್ಚರದಿಂದಿರಬೇಕು. ಒತ್ತಡ ತಂತ್ರದ ಮೂಲಕ ಬೇರೆಡೆ ಸೆಳೆಯಲು ಯತ್ನಿಸಿದರೆ ಇಲಾಖೆ, ಪಾಲಕರ ಗಮನಕ್ಕೆ ತರಬೇಕೆಂದರು.
ಪ್ರಾಚಾರ್ಯ ಗುರುರಾಜ್ ಸತ್ಯಂಪೇಟ್, ಉಪನ್ಯಾಸಕರಾದ ಲೋಹಿತ್ ಕುಮಾರ್, ಹುಲುಗಪ್ಪ ಎಸ್.ಎನ್ ಇತರರಿದ್ದರು.