ಪೊಲೀಸ್ ಇಲಾಖೆಯಿಂದ ಹೆಲೈಟ್ ಜಾಗೃತಿ ಜಾಥಾ *ಹೆಲ್ಮೆಟ್ ಧರಿಸಿ ವಾಹನ ಚಲಾವಣೆಯಿಂದ ಅಪಘಾತ ಇಳಿಮುಖ-ಎಸ್ಪಿ

raichur
raichur
Published on

ರಾಯಚೂರು ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಬೈಕ್ ಸವಾರರು ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಹೆಲೈಟ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ದ್ವಿಚಕ್ರ ವಾಹನ ಚಲಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು, ಇದರಿಂದ ಅಪಘಾತವಾದ ತಮ್ಮ ಜೀವ ಉಳಿಯುತ್ತದೆ ಹೆಲೈಟ್ ಧರಿಸಿ ಸಂಚರಿಸುವುದರಿಂದ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆಗಳೂ ಕಡಿಮೆಯಾಗುತ್ತವೆ.

ಕಳೆದ ವರ್ಷ ಅನೇಕ ರಸ್ತೆ ಅಪಘಾತಗಳು ಸಂಭವಿಸಿದ್ದರಿಂದ ಜಿಲ್ಲೆಯಲ್ಲಿ ಕಳೆದ ನವೆಂಬರ್ 1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲೈಟ್ ಕಡ್ಡಾಯ ಮಾಡಲಾಗಿತ್ತು. ಆರಂಭದಲ್ಲಿ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದರು, ಬೇಸಿಗೆ ಹಿನ್ನಲೆಯಲ್ಲಿ ವಿನಾಯತಿ ನೀಡಲಾಗಿತ್ತು, ಕಳೆದೊಂದು ತಿಂಗಳಿನಿಂದ ಹೆಲೈಟ್ ಕಡ್ಡಾಯಗೊಳಿಸಿದ್ದು, ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲೈಟ್ ಧರಿಸುತ್ತಿದ್ದಾರೆ. ಹೆಲೈಟ್ ಧರಿಸಿ ವಾಹನ ಸಂಚಾರದಿಂದಾಗಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ, ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಪ್ರಾಣಹಾನಿಯಾಗಿಲ್ಲ, ಸಾರ್ವಜನಿಕರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ ಎಂದರು.


ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 73 ಸಾವಿರ ಪ್ರಕರಣ ದಾಖಲಿಸಲಾಗಿದ್ದು, ಸುಮಾರು 2 ಕೋಟಿಗೂ ಅಧಿಕ ದಂಡ ವಿಧಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ನಂತರ ಎಎಸ್ಪಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಹೆಲ್ಮೆಟ್ ಧರಿಸಿಕೊಂಡ ನೂರಾರು ಪೊಲೀಸರು ಬೈಕ್ ಮೂಲಕ ನಗರದ ಪ್ರಮುಖ ವೃತ್ತದಲ್ಲಿ ಸಂಚಾರಿಸಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂರ್ವರಾಜ್‌ಸಿಂಗ್ ಸೋಲಂಕಿ,ಎಎಸ್ಪಿ ಹರೀಶ್,ಕುಮಾರಸ್ವಾಮಿ, ಡಿವೈಎಸ್ಪಿ ಡಿಎಸ್‌ಪಿ ಶಾಂತವೀರ, ವೆಂಕಟೇಶ್ ಉಗಿಬಂಡಿ, ದತ್ತಾತ್ರೇಯ ಕಾರ್ನಾಡ್, ಸಿಪಿಐಗಳಾದ ಉಮೇಶ ಕಾಂಬ್ಳೆ, ನಾಗರಾಜ ಮೇಕಾ, ಪಿಎಸ್‌ಐ ಮಂಜುನಾಥ, ಸಣ್ಣ ವೀರೇಶ ನಾಯಕ,ಯರ‌್ರಿಸ್ವಾಮಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net