

-ಇಬ್ಬರು ಬೈಕ್ ಸಾವರರಿಗೆ ತೀವ್ರ ಗಾಯ
ಬೆಳಗಾವಿ: ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಕತಿ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಸ್ಥಳದಲ್ಲಿಯೇ ಮೃತಪಟ್ಠಿದ್ದಾನೆ.ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಭೀಮಪ್ಪಾ ಅರ್ಜುನ ಉಪ್ಪಾರಟ್ಟಿ (35)ಮೃತ ಮಟ್ಟಿರುವ ಪೇದೆ. ಬೆಳಗಾವಿ ತಾನಾಜಿ ಗಲ್ಲಿಯ ಆಶಿಸ ಪಾಟನೇಕರ್, ಅನಿತ್ ಆನಂದಾಚೆ ತೀವ್ರ ಗಾಯಗೊಂಡಿದ್ದಾನೆ.
ಸೋಮವಾರ ತಡರಾತ್ರಿ ಕರ್ತವ್ಯಕ್ಕೆ ಹಾಜರಾಗು ಉದ್ದೇಶದಿಂದ ಬೆಳಗಾವಿ ಕಡೆಯಿಂದ ಕಾಕತಿ ಠಾಣೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹಿಂಬದಿಯಲ್ಲಿ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಪೊಲೀಸ್ ಪೇದೆ ಮೃತ ಪಟ್ಟಿದ್ದಾನೆ. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.