ಎಎಸ್​ಐ, ಮುಖ್ಯಪೇದೆ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಬ್ಬ ಪೇದೆ ಆತ್ಮಹತ್ಯೆಗೆ ಶರಣು

Guruprasad
Published on

ಬೆಂಗಳೂರು: ಎಎಸ್​ಐ ಮತ್ತು ಮುಖ್ಯಪೇದೆ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಬ್ಬ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಪಿಗೆಹಳ್ಳಿ ಠಾಣೆಯ ಪೇದೆ ಗುರುಪ್ರಸಾದ್ ಯಲಹಂಕ 4ನೇ ಹಂತದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುಪ್ರಸಾದ್ ಮೂಲತಃ ಕನಕಪುರ ಬಳಿಯ ಬೇವೂರು ಗ್ರಾಮದವರು. ಗುರುಪ್ರಸಾದ್ ಜತೆ ಜಗಳವಾಡಿಕೊಂಡಿದ್ದ ಹೆಂಡತಿ ತವರಿಗೆ ಹೋಗಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಸಂಜೆ ಅಕ್ಕಪಕ್ಕದ ನಿವಾಸಿಗಳಿಗೆ ತಿಳಿದು ಬಂದಿದ್ದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net