ನೇಣಿಗೆ ಕೊರಳೊಡ್ಡಿದ ಮುಖ್ಯ ಪೊಲೀಸ್​ ಪೇದೆ

Sucied
Published on

ಕಲಬುರಗಿ: ನಗರದ ಪೊಲೀಸ್ ಕಾಲನಿ ಸರ್ಕಾರಿ ವಸತಿ ಗೃಹದಲ್ಲಿ ಭಾನುವಾರ ನಸುಕಿನ ಜಾವ ನೇಣು ಬಿಗಿದುಕೊಂಡು ಮುಖ್ಯ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಪುರ ಠಾಣೆಯ ಪಾಂಡುರAಗ ತಳವಾರ (೪೭) ಸಾವಿಗೆ ಶರಣಾದ ಎಚ್‌ಸಿ. ಮೂಲತಃ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದವರಾಗಿದ್ದು, ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಶನಿವಾರ ರಾತ್ರಿ ೧೦ಕ್ಕೆ ಠಾಣೆಯಲ್ಲಿ ಕರ್ತವ್ಯ ಮುಗಿಸಿ ಪಾಂಡುರಂಗ ಮನೆಗೆ ಬಂದಿದ್ದರು. ಬೇಸಿಗೆ ಬಿಸಿಲ ತಾಪದಿಂದಾಗಿ ಶಕೆ ಹೆಚ್ಚಾಗಿದೆ ಎಂದು ಹೇಳಿ ಇಬ್ಬರು ಮಕ್ಕಳು ಮನೆಯ ಛಾವಣಿ ಮೇಲೆ, ದಂಪತಿ ವಸತಿ ಗೃಹದ ಬೆಡ್ ರೂಮಿನಲ್ಲಿ ಮಲಗಿದ್ದರು. ನಸುಕಿನ ಜಾವ ಪಾಂಡುರಂಗ ಅಡುಗೆ ಕೊಣೆಗೆ ಹೋಗಿ ನೇಣು ಬಿಗಿದುಕೊಂಡಿದ್ದಾರೆ. ಡಿಸಿಪಿ ಎ.ಶ್ರೀನಿವಾಸುಲು, ಇನ್‌ಸ್ಪೆಕ್ಟರ್ ಮಂಜುನಾಥ ಬಡಿಗೇರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net