ಗೆಲ್ಲುವ ಛಲದಿಂದ ಗುರಿ ಸಾಧನೆ ಸಾಧ್ಯ

web 1
Published on

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಗ್ಲೆಬೇಕು ಎನ್ನುವ ಛಲ ಹೊಂದಿದ ವಿದ್ಯಾರ್ಥಿ ಸಮೂಹ ದೇಶಪ್ರೇಮ ಮತ್ತು ಸಾಮಾಜಿಕ ಕಳಕಳಿ ಇಟ್ಟುಕೊಂಡು ಗುರಿ ಸಾಧನೆ ಮಾಡಬೇಕು ಎಂದು ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ದಿ ಯುನಿಕ್ ಡ್ರೀಮ್ಸ್ ಸಂಸ್ಥೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಉಚಿತ ತರಬೇತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಉತ್ತಮ ಓದು ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ. ಆದರೆ, ಕೇವಲ ಓದಿನಿಂದ ಮಾತ್ರ ಸಾಧನೆ ಅಸಾಧ್ಯ. ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಯ ಕನಸು ಕಾಣಬೇಕು. ಅಧಿಕಾರಿಗಳಾಗಿ ಉತ್ತಮ ಹುದ್ದೆಯಲ್ಲಿದ್ದಾಗ ಅಧಿಕಾರ ಬಳಸಿಕೊಂಡರೆ ಸಾಲದು. ಅದು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಸಲಹೆ ನೀಡಿದರು.
ಅತಿಥಿ ಪ್ರೊ.ಜಿ.ವಿ. ಡೋಣೂರಮಠ ಅವರು ಪೊಲೀಸ್ ಪರೀಕ್ಷೆಯ ಅಂತಿಮ ಹಂತದ ತಯಾರಿ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ನಿರ್ದೇಶಕ ಬಸವರಾಜ ಬಂಗಾರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪನ್ಯಾಸಕರಾದ ಮಂಜುನಾಥ ಚಾಪೆಲ್, ಜಿ.ಕೆ. ಶಂಕರ, ಅರುಣ, ಬಾಹುಬಲಿ, ಇತರರಿದ್ದರು. ಸಂಗೀತಾ ಪ್ರಾರ್ಥಿಸಿದರು. ಹೇಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net