ಭದ್ರತೆಗಿದ್ದ ಪೇದೆ ಮೇಲೆ ಹಲ್ಲೆ

news-34-constable (1)
Published on

ಬೆಂಗಳೂರು: ರಾಜರಾಜೇಶ್ವರಿನಗರ ಐಡಿಯಲ್ ಹೋಮ್್ಸ ಲೇಔಟ್​ನಲ್ಲಿ ನಟ ದರ್ಶನ್ ಹುಟ್ಟುಹಬ್ಬ ಆಚರಣೆ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆ ಮೇಲೆ ದರ್ಶನ್ ಅಭಿಮಾನಿ ಹಲ್ಲೆ ನಡೆಸಿದ್ದಾನೆ. ಜ್ಞಾನಭಾರತಿ ಠಾಣೆ ಪೇದೆ ದೇವರಾಜ್ ಹಲ್ಲೆಗೆ ಒಳಗಾದವರು. ಅವರು ಕೊಟ್ಟ ದೂರಿನ ಅನ್ವಯ ದರ್ಶನ್ ಅಭಿಮಾನಿ ಹಾಗೂ ಹುಟ್ಟುಹಬ್ಬ ಕಾರ್ಯಕ್ರಮದ ವ್ಯವಸ್ಥಾಪಕರ ವಿರುದ್ಧ ಆರ್.ಆರ್. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲಿ ಅಭಿಮಾನಿಗಳು ಸರದಿಯಲ್ಲಿ ಹೋಗಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ, ನೂಕುನುಗ್ಗಲು ಉಂಟಾಗಿತ್ತು. ಅದನ್ನು ನಿಯಂತ್ರಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಯಾರೋ ದೇವರಾಜ್ ಅವರ ಮೂಗಿಗೆ ಮತ್ತು ಕಣ್ಣಿನ ಮೇಲೆ ಬಲವಾಗಿ ಹೊಡೆದಿದ್ದಾರೆ. ಮೂಗಿನಲ್ಲಿ ರಕ್ತಸ್ರಾವವಾಗಿದ್ದು ಕೂಡಲೇ ಸಿಬ್ಬಂದಿಯೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net