ತೃತೀಯ ಲಿಂಗಿಗಳಿಗೆ ಪೊಲೀಸರ ಕ್ಲಾಸ್​

Untitled-2
ಸಾರ್ವಜನಿಕರಿಗೆ ಕಿರಿಕಿರಿ ಮಾಡದಂತೆ ತೃತೀಯ ಲಿಂಗಿಗಳಿಗೆ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೃತ್ತದಲ್ಲಿ ಸಬ್​ ಇನ್​ಸ್ಪೆಕ್ಟರ್​ ಕೃಷ್ಣಪ್ಪ ಎಚ್ಚರಿಕೆ ನೀಡಿದರು.
Published on

ದೊಡ್ಡಬಳ್ಳಾಪುರ : ಟ್ರಾಫಿಕ್​ ಸಿಗ್ನಲ್​ಗಳಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಹಣ ನೀಡುವಂತೆ ಬಲವಂತ

ಮಾಡಿ, ಹಣ ಕೊಡದಿದ್ದರೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ತೃತೀಯ ಲಿಂಗಿಗಳಿಗೆ ಶುಕ್ರವಾರ ನಗರ ಠಾಣಾ ಪೊಲೀಸ್​ ಸಬ್​ ಇನ್ಸ್​ಸ್ಪೆಕ್ಟರ್​ ಕೃಷ್ಣಪ್ಪ ಕ್ಲಾಸ್​ ತೆಗೆದುಕೊಂಡಿದ್ದಾರೆ.

ನಗರದ ಪ್ರವಾಸಿ ಮಂದಿರ ವೃತ್ತದ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದ್ದು, ಸಿಗ್ನಲ್​ಗಳಲ್ಲಿ ವಾಹನಗಳು ನಿಂತ ಕೂಡಲೇ ಅಲ್ಲಿಗೆ ಹೋಗಿ ಹಣ ನೀಡುವಂತೆ ಬಲವಂತ ಮಾಡುವುದು, ಒಂದು ವೇಳೆ ಹಣ ನೀಡದಿದ್ದರೆ ವಾಹನ ಸವಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಶಾಪ ಹಾಕುವುದು, ದುರುಗುಟ್ಟಿ ನೋಡುವುದು, ಅಶ್ಲೀಲವಾಗಿ ನಡೆದುಕೊಳ್ಳವುದು ಹೀಗೆ ಅನುಚಿತವಾಗಿ ವರ್ತನೆ ಮಾಡುತ್ತಿರುವ ಆರೋಪ ಹಾಗೂ ದೂರುಗಳು ಬಂದ ಹಿನ್ನೆಲೆ ಪೊಲೀಸ್​ ಇನ್​ಸ್ಪೆಕ್ಟರ್​ ಅಮರೇಶ್​ ಗೌಡ ಸೂಚನೆ ಮೇರೆಗೆ ಸಬ್​ಇನ್​ಸ್ಪೆಕ್ಟರ್​ ಕೃಷ್ಣಪ್ಪ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅನುಚಿತವಾಗಿ ವರ್ತನೆ ಮಾಡುತ್ತಿದ್ದ ತೃತೀಯ ಲಿಂಗಿಗಳನ್ನು ಕರೆಸಿ, ಸಾರ್ವಜನಿಕರಿಗೆ ಕಿರಿಕಿರಿ, ತೊಂದರೆ ಕೊಡಬಾರದು, ಹಣ ನೀಡುವಂತೆ ಬಲವಂತ ಮಾಡಬಾರದು, ಒಂದು ವೇಳೆ ಇದೇ ಚಾಳಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಕೊಟ್ಟರು.

ಮುಂದಿನ ದಿನಗಳಲ್ಲಿ ಸಭೆ ಕರೆಯಲಾಗುವುದು. ಎಲ್ಲರೂ ಸಭೆಗೆ ಹಾಜರಾಗಬೇಕು. ಪೊಲೀಸ್​ ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net