ಸನವಳ್ಳಿ ಬಳಿ ಪೊಲೀಸ್ ಚೆಕ್​ಪೋಸ್ಟ್ ಆರಂಭ

3mnd2= check post
Published on

ಮುಂಡಗೋಡ: ತಾಲೂಕಿನ ವಿವಿಧ ಭಾಗಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ಸನವಳ್ಳಿ ಗ್ರಾಮದ ಬಳಿ ಪೊಲೀಸ್ ಚೆಕ್​ಪೋಸ್ಟ್ ಆರಂಭಿಸಲಾಗಿದೆ.

ಕಳೆದ ಎರಡು ತಿಂಗಳಿಂದ ತಾಲೂಕಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ನಡೆದಿವೆ. ಕಳ್ಳತನ ಮಾಡುವವರು ರಾತ್ರಿ ಮುಂಡಗೋಡನಿಂದ ಸನವಳ್ಳಿ ಮಾರ್ಗವಾಗಿ ಬಂಕಾಪುರದತ್ತ ತೆರಳುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಪಟ್ಟಣದ ವ್ಯಕ್ತಿಯೊಬ್ಬರನ್ನು ಹಣಕ್ಕಾಗಿ ಅಪಹರಣ ಮಾಡಿಕೊಂಡು ಇದೇ ಮಾರ್ಗವಾಗಿ ಹೋಗಲಾಗಿತ್ತು. ಆದ್ದರಿಂದ ಪೊಲೀಸರು ತಾಲೂಕಿನ ಸನವಳ್ಳಿ ಗ್ರಾಮದ ಬಳಿ ತನಿಖಾ ಕೇಂದ್ರ ಮಾಡಿದ್ದು, ದಿನದ 24 ಗಂಟೆಯೂ ವಾಹನ ತಪಾಸಣೆ ಮಾಡಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರ ಸೂಚನೆ ಮೇರೆಗೆ ಸನವಳ್ಳಿ ಬಳಿ ಪೊಲೀಸರು ಚೆಕ್​ಪೋಸ್ಟ್ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net