ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಪೊಲೀಸ್‌

police
Published on

ಮಂಗಳೂರು: ಬಿಹಾರ ಮೂಲದ ವ್ಯಕ್ತಿಯೊಬ್ಬನಿಂದ ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಸ್ಥಳೀಯರು ಹಾಗೂ ಮಂಗಳೂರು ಪೊಲೀಸ್‌ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ಸೇರಿ ಅಟ್ಟಿಸಿ ಹಿಡಿದಿದ್ದಾರೆ.
ಮೊದಲು ಆರೋಪಿ ಶಮಂತ್‌ ಎಂಬಾತ ಓಡಿ ತಪ್ಪಿಸಿಕೊಳ್ಳುತ್ತಿರುವಾಗ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ವರುಣ್‌ ಆಳ್ವ ಎಂಬವರು ಅಟ್ಟಿಸಿಕೊಂಡು ಹೋಗಿ ಹಿಡಿದು ನೆಲಕ್ಕೆ ಒತ್ತಿ ಆತನನ್ನು ಅರೆಸ್ಟ್‌ ಮಾಡುವ ವಿಡಿಯೋ ವೈರಲ್‌ ಆಗಿದೆ. ಆರೋಪಿಗಳಾದ ಅತ್ತಾವರ ಬಾಬುಗುಡ್ಡೆಯ ಶಮಂತ್‌(20), ನೀರುಮಾರ್ಗ ಪಾಲ್ದನೆಯ ಹರೀಶ್‌ ಪೂಜಾರಿ(32) ಎಂಬವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ರಾಜೇಶ್‌ ಪರಾರಿಯಾಗಿದ್ದಾನೆ. ಕಳವು ಮಾಡಿದ್ದ ಸ್ಯಾಮ್‌ಸಂಗ್‌ ಮೊಬೈಲ್‌ ಹ್ಯಾಂಡ್‌ಸೆಟ್‌ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಶಮಂತ್‌ನನ್ನು ಬಂಧಿಸುತ್ತಿರುವುದನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ವೈರಲ್‌ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net