ಪೌಷ್ಟಿಕ ಆಹಾರಕ್ಕೆ ಕನ್ನ ಪ್ರಕರಣದಲ್ಲಿ ಪೊಲೀಸರ ತಲೆದಂಡ

police suspension
Published on

ಹುಬ್ಬಳ್ಳಿ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಕಸಬಾಪೇಟ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯಲೋಪ ಹಾಗೂ ಗುಪ್ತ ಮಾಹಿತಿ ಸಂಗ್ರಹ ಮಾಡುವಲ್ಲಿ ವಿಫಲರಾದ ಮಾಬುಸಾಬ್ ವಾಲೀಕಾರ, ಗೋಣೆಪ್ಪನವರ ಅವರ ಮೇಲೆ ವಿಚಾರಣೆ ಬಾಕಿ ಇಟ್ಟು ಅಮಾನತು ಮಾಡಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಎನ್. ಶಶಿಕುಮಾರ, ಪೌಷ್ಟಿಕ ಆಹಾರ ಸಂಗ್ರಹ ಮತ್ತು ಸಾಗಣೆ ಪ್ರಕರಣದಲ್ಲಿ 32 ಜನರನ್ನು ಈಗಾಗಲೇ ಬಂಧಿಸಿದ್ದೇವೆ. ಅಂತಾರಾಜ್ಯ ಪೊಲೀಸರ ಸಹಾಯ ಪಡೆದು, ತನಿಖೆ ಮುಂದುವರಿದಿದೆ. ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಿದು. ಲುಕೌಟ್ ನೋಟಿಸ್ ಕೂಡ ಕೊಡಲಾಗಿದೆ. ಇದರಲ್ಲಿ ನನ್ನ ವೈಫಲ್ಯ ಎನ್ನುವುದು ತಪ್ಪಾಗುತ್ತದೆ. ಆರೋಪಿಗಳನ್ನು ಬಂಧಿಸದಂತೆ ನನಗೆ ಯಾರೂ ಒತ್ತಡ ಹೇರಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net