ಮುಂಡಗೋಡದಲ್ಲಿ ಪೊಲೀಸ್ ಬೀಟ್ ಸಭೆ

26mnd3
Published on

ಮುಂಡಗೋಡ: ತಾಲೂಕಿನ ನಂದಿಗಟ್ಟ ಗ್ರಾಮದಲ್ಲಿ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಬೀಟ್ ಸಭೆಯನ್ನು ಶನಿವಾರ ನಡೆಸಲಾಯಿತು.

ನಂದಿಗಟ್ಟ ಗ್ರಾಮದ ದೇವಸ್ಥಾನದಲ್ಲಿ ಪೊಲೀಸ್ ಬೀಟ್ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಮುಖಂಡರನ್ನು ಕರೆದು ಸಭೆ ನಡೆಸಲಾಯಿತು. ಅಪರಾಧ ಪ್ರಕರಣಗಳು ನಡೆಯದಂತೆ ಹಾಗೂ ಮುಂಜಾಗ್ರತೆ ವಹಿಸುವ ಬಗೆಗೆ ಮತ್ತು ಅಪರಾಧ ಘಟನೆಗಳು ಸಂಭವಿಸಿದರೆ ಅಥವಾ ಸಂಭವಿಸುವ ಸಾಧ್ಯತೆಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು. ಆನ್​ಲೈನ್​ನಲ್ಲಿ ನಡೆಯುವ ವಂಚನೆಗಳ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net