ಅರಮನೆ ಆವರಣದಲ್ಲಿ ಪೊಲೀಸ್‌ ಬ್ಯಾಂಡ್‌ ನಿನಾದ

34
Published on

ಮೈಸೂರು: ಝಗಮಗಿಸುವ ಹೊಂಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದ ಅರಮನೆಯ ಆವರಣದಲ್ಲಿ ಅಲೆಅಲೆಯಾಗಿ ತೇಲಿಬಂದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯ ಸಂಗೀತ ಸುಧೆಗೆ ಕೇಳುಗರ ಮನಸೋತರು.

ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಗರುವಾರ ಆಯೋಜಿಸಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವಾದ ಪೊಲೀಸ್‌ ಬ್ಯಾಂಡ್‌ ಸಮೂಹ ವಾದ್ಯಮೇಳದಲ್ಲಿ ಶಿಸ್ತುಬದ್ಧವಾಗಿ ನುಡಿಸಿದ ಪೊಲೀಸ್ ವಾದ್ಯವೃಂಧವು ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
ಮೊದಲಿಗೆ ಬಸಪ್ಪಶಾಸ್ತ್ರಿ ಅವರ ರಚನೆಯ 'ಕಾಯೋ ಶ್ರೀ ಗೌರಿ' ಗೀತೆಯನ್ನು ನುಡಿಸಿದರು. ನಂತರ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ರಚನೆಯ  ಆಠಾಣ ರಾಗ ಸಂಯೋಜನೆಯ ಆದಿತಾಳದಲ್ಲಿ 'ಶ್ರೀ ಮಹಾಗಣಪತಿಂ' ಗೀತೆ ನುಡಿಸಿದರು.

ಬಳಿಕ ಇಮ್ಯಾನುಯೆಲ್‌ ಫ್ರಾನ್ಸಿಸ್‌ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್‌, ಪಿಯಾನೊ ವಾದನ  ಕಂಡು ಪ್ರೇಕ್ಷಕರು ಪರವಶರಾದರು.
ಕರ್ನಾಟಕ ವಾದ್ಯವೃಂದದವರು ಆದಿಶಂಕರಚಾರ್ಯರು ರಚಿಸಿದ 'ಐಗಿರಿ ನಂದಿನಿ' ಗೀತೆಯನ್ನು ಪುನ್ನಾಗವರಾಳಿ ರಾಗದಲ್ಲಿ ಆದಿತಾಳ ರಾಗದಲ್ಲಿ ಪ್ರಸ್ತುತ ಪಡಿಸಿದರು. ಆಪ್ತಮಿತ್ರ ಚಲನಚಿತ್ರ ಗೀತೆಯಾದ 'ಕಣಕಾಣೆದೆ ಶಾರದೆ' ಹಾಡು ಹಾಗೂ ಶಂಕರಾಭರಣ ರಾಗದಲ್ಲಿ ಮುತ್ತತ್ಯಭಾಗವತ್ ರಚನೆಯ 'ನೋಟು ಸ್ವರ' ಭಾಗ್ಯದ ಲಕ್ಷ ಬಾರಮ್ಮ ನುಡಿಸುವ ಮೂಲಕ ಮೋಡಿ ಮಾಡಿದರು. 

ಆಂಗ್ಲ ವಾದ್ಯವೃಂದವರು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕಾಂಟ್ ಡೌನ್, ಕೃಷ್ಟೊಫರ್ ಪ್ರಾನ್ಸಿಸ್ ಸಂಯೋಜನೆಯ ಸೆರನಡ್ ಗೀತೆ, ಬಿಥೊವೆನ್ಸ್ ಪಿಯಾನೋ ಸೋಲೊ, ಜಯ ಹೋ', ಟೋನಿ ಮ್ಯಾಥ್ಯೂ ಸಂಯೋಜನೆಯ ಬಿಲಿವರ್ ಹಾಗೂ ಲೇ ಆನ್ ಯುವರ್ ಲವ್ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  ಹಲವಾರು ಸುಪ್ರಸಿದ್ಧ ಕೃತಿಗಳನ್ನು ಪ್ರಸ್ತುತ ಪಡಿಸಿದ ಕರ್ನಾಟಕ  ಹಾಗೂ ಆಂಗ್ಲ ವಾದ್ಯವೃಂದವರಿಗೆ ನೆರೆದಿದ್ದ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೊಲೀಸ್ ಬ್ಯಾಂಡ್ ಸಂಗೀತ ಕಾರ್ಯಕ್ರಮದ ನಂತರ ವಾರಿಜಾ ವೇಣುಗೋಪಾಲ್ ಅವರು ಫ್ಯೂಜನ್ ಸಂಗೀತದ ಮೂಲಕ ಸಂಗೀತ ಪ್ರಿಯರ ಮನಗೆದ್ದರು.

ReplyForward
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net