

ಚಳ್ಳಕೆರೆ: ನಗರದಲ್ಲಿ ಆಟೋ ಚಾಲಕರು ನಿಯಮ ಪಾಲನೆ ಜತೆಗೆ ಸಾರ್ವಜನಿಕರ ಹಿತ ಕಾಪಾಡುವ ದೃಷ್ಟಿಯಲ್ಲಿ ಸೇವೆ ನೀಡಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಆರ್.ಎಫ್ ದೇಸಾಯಿ ಹೇಳಿದರು.
ನಗರದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಆಟೋ ಚಾಲಕರು ಮತ್ತು ಮಾಲೀಕರ ಸಭೆ ನಡೆಸಿ ಮಾತನಾಡಿ, ಪ್ರಸ್ತುತ ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಿದೆ.
ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆ ನಿಯಮಗಳ ಪಾಲನೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸೂಕ್ತವಾಗಿ ಸಹಕಾರ ನೀಡಬೇಕು ಎಂದರು.
ಕೆಲ ಶಾಲಾ-ಕಾಲೇಜು, ಆಸ್ಪತ್ರೆ ಭಾಗದ ಸಂಚಾರ ದಟ್ಟಣೆ ಕಂಡು ಬರುವ ಸ್ಥಳಗಳಲ್ಲಿ ಆಟೋ ಚಾಲಕರು ವಾಹನಗಳನ್ನು ಜಾಗೃತರಾಗಿ ಚಲಾಯಿಸಬೇಕು. ಸಮವಸ್ತ್ರ ಧರಿಸಬೇಕು.
ವಾಹನದ ಪರವಾನಗಿ ಪತ್ರ ಸೇರಿ ಚಾಲಕರ ದಾಖಲಾತಿಗಳು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು ಎಂದು ತಿಳಿಸಿದರು.