ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಾಳಿ

Screenshot_2024-03-31-12-44-04-96.jpg
Published on

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದರು.
 ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನಗರ ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ)  ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಯಿತು.
 ಹಿಂಡಲಗಾ ಜೈಲಿನಲ್ಲಿ ವ್ಯಾಪಕವಾಗಿ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಕೈದಿಗಳು ಮೊಬೈಲ್, ಟಿ.ವಿ. ಬಳಸುತ್ತಿದ್ದಾರೆ ಎಂಬ ಆರೋಪ ಈಚೆಗೆ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು 1 ಗಂಟೆಗೂ ಅಧಿಕ ಕಾಲ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹನ್ ಜಗದೀಶ ಅವರು, ಐವರು ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಸಿಬ್ಬಂದಿ ಸೇರಿ ದಾಳಿ ಮಾಡಿದ್ದೇವೆ. ಶ್ವಾನದಳದ ಮೂಲಕ ಇಡೀ ಜೈಲಿನ ತಪಾಸಣೆ ಮಾಡಿದ್ದೇವೆ. ಇಲ್ಲಿ ತಂಬಾಕು, ಸಿಗರೇಟಿನ ಪ್ಯಾಕ್‌ಗಳು ಸಿಕ್ಕಿವೆ. ಭದ್ರತೆ ಇದ್ದರೂ ಇವೆಲ್ಲ ಹೇಗೆ ಒಳಗೆ ಹೋಗುತ್ತವೆ ಎಂಬುದರ ಕುರಿತಾಗಿ ತನಿಖೆ ಮಾಡಬೇಕಿದೆ ಎಂದರು. ಸದ್ಯ ಮೊಬೈಲ್ ಸಿಕ್ಕಿಲ್ಲ. ಆದರೆ, ಮೊಬೈಲ್ ಚಾರ್ಜರ್ ಸಿಕ್ಕಿವೆ. ಬ್ಲ್ಯೂಟೂಥ್ ಡಿವೈಸ್ ಸಹ ಸಿಕ್ಕಿದ್ದು, ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು. ಇಲ್ಲಿನ ಕೈದಿಯೊಬ್ಬ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆಮಾಡಿ, ಜೀವ ಬೆದರಿಕೆ ಹಾಕಿದ ಘಟನೆಯೂ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net