ದಾರಿತಪ್ಪಿದ ಪ್ರವಾಸಿಗರಿಗೆ ಪೊಲೀಸರ ನೆರವು

Tourist who rescued by Gokarna Police
Published on

ಗೋಕರ್ಣ: ಇಲ್ಲಿನ ಓಂ ಬೀಚ್​ನ ದುರ್ಗಮ ಪರ್ವತ ಪ್ರದೇಶದ ಮೂಲಕ ಪ್ಯಾರಡೈಸ್ ಬೀಚ್​ಗೆ ಟ್ರೆಕಿಂಗ್ ಮಾಡಲು ಹೋಗಿದ್ದ ಹೈದರಾಬಾದ್​ನ ಮೂವರು ಯುವ ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಪ್ರವಾಸಿಗರಾದ ಭಾರ್ಗವ ರೆಡ್ಡಿ, ಸುಜಿತ್ ಕೆ. ಮತ್ತು ಶ್ಯಾಮಲಾ ತ್ರಿವೇಣಿ ಎನ್ನುವವರು ಕಾಡಿನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಾಗ ಪೊಲೀಸ್ ಠಾಣೆಯನ್ನು ಸಂರ್ಪಸಿ ಸಹಾಯ ಕೋರಿದ್ದರು.

ಅಪರಾಧ ವಿಭಾಗದ ರಾಜೇಶ ನಾಯ್ಕ ಮತ್ತು ಸಚಿನ್ ನಾಯ್ಕ ಮೊಬೈಲ್ ಲೊಕೇಶನ್ ಬಳಸಿ ಅವರಿದ್ದ ಸ್ಥಳಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಮೂವರನ್ನು ಸುರಕ್ಷಿತವಾಗಿ ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net