ಬಲೂನ್ ಮಾರುವ ನೆಪದಲ್ಲಿ ಬೀಗ ಹಾಕಿದ ಮನೆಗೆ ಕನ್ನ.... ನಟೋರಿಯಸ್ ಬಗಾರಿಯಾ ಗ್ಯಾಂಗ್ ಅರೆಸ್ಟ್

bagariya pic
Published on

ಬೆಂಗಳೂರು: ಬಲೂನ್ ಮಾರುವ ನೆಪದಲ್ಲಿ ರಾಜಧಾನಿಗೆ ಕಾಲಿಟ್ಟಿದ್ದ ನಟೋರಿಯಸ್ ಬಗಾರಿಯಾ ಗ್ಯಾಂಗ್ ಸದಸ್ಯರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳನ್ನು ಮುಖೇಶ್, ಧರ್ಮ, ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಇಷ್ಟು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಬವೆರಿಯಾ ಗ್ಯಾಂಗ್ ನಂತರ ಬಲೂನ್ ಮಾರುವ ನೆಪದಲ್ಲಿ ಬಗಾರಿಯಾ ಗ್ಯಾಂಗ್ ಕಾಲಿಟ್ಟಿತ್ತು.

ಹಗಲು ವೇಳೆ ಏರಿಯಾಗಳಲ್ಲಿ ರೌಂಡ್ಸ್ ಹಾಕುವ ಈ ಗ್ಯಾಂಗ್, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಕೇವಲ 3-4 ನಿಮಿಷದಲ್ಲೇ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗುತ್ತಿತ್ತು.

ಆಗಸ್ಟ್ 8ರಂದು ಅಮೃತನಗರದ ಮನೆಯೊಂದಕ್ಕೆ ಕನ್ನ ಹಾಕಿದ್ದ ಖದೀಮರ ಗ್ಯಾಂಗ್, ರಾಜಸ್ಥಾನದ ಅಜ್ಮೀರ್​​ಗೆ ಎಸ್ಕೇಪ್​ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು, ರಾಜಸ್ತಾನಕ್ಕೆ ತೆರಳಿ ಸತತ 1 ವಾರಗಳ ಕಾಲ ಪರಿಶ್ರಮ ನಡೆಸಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net