

ಮಂಗಳೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟ ಹಾಗೂ ಇನ್ನೊಬ್ಬ ಬಾಲಕಿಯನ್ನು ಅತ್ಯಾಚಾರಗೈದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದೆ.
ರಿಜ್ವಾನ್, ಮಹಮ್ಮದ್ ಕಾಸಿಂ ಮತ್ತು ಅಜ್ಮಲ್ ಹುಸೇನ್ ಎಂಬವರು ಬಂಧಿತ ಆರೋಪಿಗಳು. ಇವರನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರಿಕ್ಷಾ ಚಾಲಕನಾಗಿರುವ ರಿಜ್ವಾನ್ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಫರಂಗಿಪೇಟೆಯಲ್ಲಿ ಬಾಲಕಿಯ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುತ್ತಾನೆ. ಇನ್ನು ಅರ್ಕುಳದ ಮಹಮ್ಮದ್ ಕಾಸಿಂ, ಅಜ್ಮಲ್ ಹುಸೈನ್ ಐದು ತಿಂಗಳ ಹಿಂದೆ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದರು. ಈ ಆರೋಪಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.