ಇನ್ನೊಬ್ಬರ ಪತ್ನಿ ಜತೆ ಸಲಿಗೆಯಿಂದ ಇದ್ದಿದ್ದೇ ಜೀವಕ್ಕೆ ಮುಳುವಾಯಿತು; ಕಲ್ಲಿನಿಂದ ಜಜ್ಜಿ ಕೊಲೆ

crime
Published on

ಬೆಂಗಳೂರು: ಪತ್ನಿಯ ಜತೆ ಸಲಿಗೆಯಿಂದಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್​ಪೇಟೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ.

ಶ್ರೀನಿವಾಸ ಅಲಿಯಾಸ್ ಸೀನ ಎಂಬಾತ ಕೊಲೆಯಾದ ವ್ಯಕ್ತಿ. ಕಾಟನ್​ಪೇಟೆಯ ಭಕ್ಷಿಗಾರ್ಡನ್​ನಲ್ಲಿ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಸಂತೋಷ್ ಎಂಬಾತನನ್ನು ಕಾಟನ್​ಪೇಟೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ರೀನಿವಾಸ್​ ಸಂತೋಷನ ಪತ್ನಿಯ ಜೊತೆ ಸಲಿಗೆಯಿಂದ ಇರುತ್ತಿದ್ದುದರಿಂದ ಆತ ಅಕ್ರಮ ಸಂಬಂಧ ಹೊಂದಿರಬಹುದು ಎಂದುಕೊಂಡ ಸಂತೋಷ್, ಅದೇ ಸಿಟ್ಟಿನಿಂದ ಆತನನ್ನು ಕಲ್ಲಿನಿಂದ ಜ್ಜಿ ಕೊಲೆ ಮಾಡಿದ್ದಾನೆ. ಕಾಟನ್​ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net