ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ; ಗಂಡ ಸೇರಿ ನಾಲ್ವರಿಂದ ದುಷ್ಕೃತ್ಯ, ಇಬ್ಬರ ಬಂಧನ..

Crime
Published on

ಚಿತ್ರದುರ್ಗ: ಪತಿಯೂ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆ ಪೈಕಿ ಪತಿ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಚಿತ್ರದುರ್ಗ ನಗರದ ಚೋಳಗುಡ್ಡ ನಿರ್ಜನ ಪ್ರದೇಶದಲ್ಲಿ 17 ವರ್ಷದವಳೊಬ್ಬಳ ಮೇಲೆ ಈ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಇದರಲ್ಲಿ ಈಕೆಯನ್ನು ಮದುವೆಯಾಗಿದ್ದವನೇ ಭಾಗಿಯಾಗಿರುವುದು ವಿಪರ್ಯಾಸ. ಈತ ಒಂದು ವರ್ಷದ ಹಿಂದೆ ಬೆದರಿಸಿ ಮದುವೆಯಾಗಿರುವ ಆರೋಪವಿದೆ.

ಪತಿ ಶಹಬಾಜ್ (28), ದಾದಾಪೀರ್ (20) ಬಂಧಿತ ಆರೋಪಿಗಳು. ಮದುವೆ ಬಳಿಕ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದವ, ಜೂನ್ 7ರಂದು ನಗರದ ಹೊರವಲಯಕ್ಕೆ ಕರೆದೊಯ್ದು ಮೂವರು ಸ್ನೇಹಿತರ‌ ಜತೆಗೂಡಿ ಹಲ್ಲೆ ಮಾಡಿದ್ದಲ್ಲದೆ, ಗ್ಯಾಂಗ್ ರೇಪ್ ಮಾಡಿರುವ ಆರೋಪವಿದೆ. ಅಲ್ಲದೆ ದೂರು ನೀಡದಂತೆ ಕೊಲೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net