ಹುಬ್ಬಳ್ಳಿ ಗಲಭೆ ಪ್ರಕರಣ; ಪಾಲಿಕೆ ಸದಸ್ಯನ ಬಂಧನ..

Honyala
Published on

ಹುಬ್ಬಳ್ಳಿ: ವಾಟ್ಸ್​ಆ್ಯಪ್​ನಲ್ಲಿ ಎಡಿಟೆಡ್ ವಿಡಿಯೋವೊಂದನ್ನು ಸ್ಟೇಟಸ್ ಆಗಿ ಹಾಕಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯನನ್ನು ಪೊಲಿಸರು ಬಂಧಿಸಿದ್ದಾರೆ.

ಎಐಎಂಐಎಂ ಪಕ್ಷದ ಮುಖಂಡ, ಕಾರ್ಪೋರೇಟರ್​ ನಜೀರ್ ಅಹ್ಮದ್ ಹೊನ್ಯಾಳ ಬಂಧಿತ ವ್ಯಕ್ತಿ. ಗಲಭೆಯಲ್ಲಿ ಈತನ ಪಾತ್ರ ಇರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಚಾರಣೆಯಲ್ಲಿ ಕಂಡುಬಂದಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ನಜೀರ್ ಅಹ್ಮದ್​ ಹೊನ್ಯಾಳರನ್ನು ಇಂದು ಬಂಧಿಸಿರುವ ಪೊಲೀಸರು ಆರೋಗ್ಯ ತಪಾಸಣೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ಕರೆದೊಯ್ದಿದ್ದಾರೆ. ನಜೀರ್ ಅಹ್ಮದ್ ಹೊನ್ಯಾಳ್ ಜೊತೆಗೆ ಮೊಹ್ಮದ್ ಆರೀಫ್ ಹಾಗೂ ಬಾಷಾ ಪುಲಾರೆಯನ್ನೂ ಪೊಲೀಸರು ಆರೋಗ್ಯ ತಪಾಸಣೆಗೆ ಕರೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net