

ಕೋಲಾರ: ಜಿಲ್ಲೆಯ ನಗರಸಭೆ ಸದಸ್ಯನೊಬ್ಬನ ಕೊಲೆಯ ಹಿಂದೆ ಹದಿನಾರು ಮಂದಿ ಇದ್ದಿರುವುದು ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ಕು ತಂಡ, ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದೆ.
ಕೋಲಾರದ ಮುಳಬಾಗಿಲು ಪಟ್ಟಣದ ನಗರಸಭೆ ಸದಸ್ಯ ಜಗನ್ಮೋಹನ್ ರೆಡ್ಡಿಯ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ. ಜೂ. 7ರಂದು ಈ ಕೊಲೆ ನಡೆದಿತ್ತು.
ಬಾಲಾಜಿ ಸಿಂಗ್ ಅಲಿಯಾಸ್ ಗಬ್ಬರ್, ರೋಹಿತ್ ಕುಮಾರ್, ಮಧು ಅಲಿಯಾಸ್ ಮನೋಜ್, ಧನು, ಜಗನ್, ಅಭಿನಂದನ್, ಧನಂಜಯ, ಮಹೇಶ್ ನವೀನ್ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ಮತ್ತು ಕೊಲೆ ಮಾಡಲು ಸಹಕಾರ ನೀಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ಪೊಲೀಸರ ನಾಲ್ಕು ತಂಡಗಳು ಕುಪ್ಪಂ, ಮೈಸೂರು ಗೋವಾ, ಮಹಾರಾಷ್ಟ್ರ, ವಿಜಯವಾಡ ಮತ್ತಿತರರ ಕಡೆ ಹುಡುಕಾಟ ನಡೆಸಿ ಈ ಆರೋಪಿಗಳನ್ನು ಬಂಧಿಸಿದೆ.