

ದಾವಣಗೆರೆ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲೋಲೇಶ್ವರ ಗ್ರಾಮದಲ್ಲಿ ಘಟನೆ ನಡೆದಿದೆ.
ಈ ಗ್ರಾಮದ ಹನುಮಂತ ಎಂಬಾತ ಕಲರ್ ಪ್ರಿಂಟ್ ಬಳಸಿ ಖೋಟಾನೋಟು ಮಾಡುತ್ತಿದ್ದ. ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಬಂಧಿತ ಹನುಮಂತನಿಂದ ಮಾಹಿತಿ ಪಡೆದ ಪೊಲೀಸರು ಉಳಿದ 10 ಮಂದಿಯನ್ನೂ ಬಂಧಿಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಖೋಟಾನೋಟು ಹಾವಳಿ ಹೆಚ್ಚಾಗಿದೆ.ಮಂಡ್ಯದ ಮದ್ದೂರು ತಾಲೂಕಿನ ಅಂಕನಾಥಪುರದಲ್ಲಿ ವೃದ್ಧನೋರ್ವನಿಗೆ ಕಲರ್ ಝೆರಾಕ್ಸ್ ನೋಟುಗಳನ್ನು ಕರೆನ್ಸಿ ಎಂದು ನಂಬಿಸಿ ಕುರಿ ಖರೀದಿ ಮಾಡುವ ಮೂಲಕ ವಂಚಿಸಿದ ಘಟನೆ ನಿನ್ನೆ ನಡೆದಿದೆ.