ಬಾಗಿಲು ಮುರಿದು 40.66 ಗ್ರಾಂ ಚಿನ್ನಾಭರಣ ದೋಚಿದ್ದ ಖದೀಮನ ಬಂಧನ

IMG-20230714-WA0007.jpg
Published on

ಬೆಳಗಾವಿ : ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರ ಎಗ್ಗರಿಸಿ ಫರಾರಿಯಾಗಿದ್ದ ಖದೀಮನನ್ನು ಬಲೆಗೆ ಬಿಳಿಸುವಲ್ಲಿ ಜಿಲ್ಲೆಯ ನಿಪ್ಪಾಣಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ನಿಪ್ಪಾಣಿ ತಾಲೂಕಿನ ಮಮದಾಪೂರ ಗ್ರಾಮದ ಕುಮಾರ ರಾವಸಾಹೇಬ ಕೋಳಿ ಈ ಕಳ್ಳತನ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ. ನಿಪ್ಪಾಣಿ ಸಮೀಪದ ಲಖನಾಪುರ ಗ್ರಾಮದ ಮಲಗೌಡ ಪಾಟೀಲ್ ಎಂಬುವವರ ಮನೆಯಲ್ಲಿ ಕಳ್ಳನೋರ್ವ 40.66 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
ಈ ಕುರಿತು ನಿಪ್ಪಾಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕಳ್ಳತನ ಪ್ರಕರಣವನ್ನು ನಿಪ್ಪಾಣಿ ಪೊಲೀಸರು ಭೇದಿಸಿದ್ದು ಬಂಧಿತನಿಂದ 1 ಲಕ್ಷ 89 ಸಾವಿರದಾ 564 ರೂ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಆರೋಪಿತ ಕುಮಾರ್ ಕೋಳಿ ಈತ ಲಖನಾಪುರಕ್ಕೆ ಸೆಂಟ್ರಿಂಗ್ ಕೆಲಸ ಮಾಡಲು ಬಂದಿದ್ದ. ಈ ವೇಳೆ ಮಲಗೌಡ ಪಾಟೀಲ ಎಂಬುವರ ಮನೆ ಮೇಲೆ ಕಣ್ಣಿಟ್ಟು ಗುರುವಾರ ರಾತ್ರಿ 2.30ರ ವೇಳೆಗೆ ಮನೆ ಬಾಗಿಲು ಮುರಿದು ಒಳನುಗ್ಗಿ ಮನೆಯಲ್ಲಿದ್ದ ತಿಜೋರಿಯಲ್ಲಿದ್ದ 25 ಗ್ರಾಂ ಚಿನ್ನದ ಸರ, 10 ಗ್ರಾಂ ಚಿನ್ನದ ಉಂಗುರ ಸೇರಿ ಒಟ್ಟು 40.66 ಚಿನ್ನಾಭರಣಗಳನ್ನು ಕಳವು ಮಾಡಿದ್ದನು.
ಪೊಲೀಸರು ತನಿಖೆ ನಡೆಸಿದಾಗ ಶಂಕಿತನ ಬಳಿ ಚಿನ್ನಾಭರಣ ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ಆತನಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಭೇಧಿಸುವಲ್ಲಿ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಅವರ ನೇತೃತ್ವದಲ್ಲಿ ಪಿಎಸ್ ಐಗಳಾದ ರಮೇಶ ಪವಾರ, ಆರ್.ಜಿ.ಕುಂಬಾರ ಹವಾಲ್ದಾರ ಪರಶುರಾಮ ಕಾಂಬಳೆ ಎಂ.ಎ.ತೆರದಾಳ, ಮಾರುತಿ ಕಾಂಬಳೆ, ಆರ್.ಬಿ.ಪಾಟೀಲ, ಶ್ರೀಶೈಲ್ ಮಾಳಗಿ, ವೀರಪಾಕ್ಷ ಕಡೋಲಿ ಇವರುಗಳು ಶ್ರಮವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net