

ಹುಬ್ಬಳ್ಳಿ: ಫುಡ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಅಂಗಡಿ ಮಾಲೀಕರಿಂದ ಹಣ ಪೀಕುತ್ತಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.
ಮಂಜುನಾಥ ಚವ್ಹಾಣ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಲಕ್ಷ್ಮಣ ಎಂಬಾತ ಪರಾರಿಯಾಗಿದ್ದಾನೆ. ಇವರಿಬ್ಬರು ಸೇರಿ ನಗರದ ಬಟರ್ ಮಾರ್ಕೆಟ್, ದುರ್ಗದಬೈಲ್ ಸೇರಿ ಪ್ರಮುಖ ಮಾರುಕಟ್ಟೆಗೆ ತೆರಳುತ್ತಿದ್ದರು. ಅಲ್ಲಿಯ ವ್ಯಾಪಾರಸ್ಥರು, ಅಂಗಡಿ ಮಾಲೀಕರಿಗೆ ಧಮ್ಕಿ ಹಾಕಿ ಉತ್ಪನ್ನಗಳ ಮೇಲೆ ಸರಿಯಾದ ಮಾಹಿತಿ ಇಲ್ಲ ಎನ್ನುತ್ತಿದ್ದರು. ನಂತರ ಹೇಗೋ ಸಮಜಾಯಿಸಿ ಹಣ ಕೀಳುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ವ್ಯಾಪಾರಿಗಳು, ಮಂಜುನಾಥನನ್ನು ಘಂಟಿಕೇರಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಾಗಿದೆ.