ತಾಯಿಯ ಕೊಲೆ ಪ್ರಕರಣ, ದುಷ್ಟ ಪುತ್ರನ ಬಂಧನ...

UDP-26-8-Melwin (Murder Case)
Published on

ಬೈಂದೂರು ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಕೇರಳದ ವ್ಯಕ್ತಿ

ಉಡುಪಿ: ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ತಾಯಿಯನ್ನೇ ಬೆಂಕಿ ಹಾಕಿ ಸುಟ್ಟು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪುತ್ರನನ್ನು ಉಡುಪಿ ಜಿಲ್ಲೆಯ ಬೈಂದೂರು ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆ ಮಂಜೇಶ್ವರದ ನಲ್ಲಂಗಿಪಾದವು ಗ್ರಾಮದ ಮೆಲ್ವಿನ್​ ಲೂವಿಸ್​ ಮಾಂಟೆರೋ (38) ಬಂಧಿತ ಆರೋಪಿ.

ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ಆತನನ್ನು ಮಂಜೇಶ್ವರ ಪೊಲೀಸ್​ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬೈಂದೂರು ಠಾಣೆಯ ಪಿಎಸ್​ಐ ತಿಮ್ಮೇಶ ಬಿ.ಎನ್​. ಕೊಲ್ಲೂರು ಠಾಣೆಯ ಪಿಎಸ್​ಐ ವಿನಯ ಕೆ., ಠಾಣೆಗಳ ಸಿಬ್ಬಂದಿಯಾದ ನಾಗೇಂದ್ರ, ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ, ಚಿದಾನಂದ ಪಾಲ್ಗೊಂಡಿದ್ದರು ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net