

ಹಾನಗಲ್ಲ: ತಾಲೂಕಿನ ನಾಲ್ಕರ ಕ್ರಾಸ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರನ್ನು ಭಾನುವಾರ ಸಂಜೆ ಹಾನಗಲ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಇಸ್ಲಾಂಪುರ ಓಣಿ ನಿವಾಸಿ ಮುನಾವರಅಹ್ಮದ್ ಹಸನಸಾಬ ಕಳಸಾಪುರ (35), ಅಕ್ಕಿಆಲೂರ ಪೇಟೆ ಓಣಿ ನಿವಾಸಿ ಪವನ ವೀರಸಂಗಪ್ಪ ಅಪ್ಪಾಜಿ (29), ಹೊಸಪೇಟೆ ಓಣಿಯ ರುದ್ರೇಶ ಮಹೇಶ ಪಾಟೀಲ (23) ಹಾಗೂ ಇಂದಿರಾ ನಗರದ ನಿವಾಸಿ ಮೈಲಾರಿ ನಿಂಗಪ್ಪ ಬಾಕಿರ್ (26) ಬಂಧಿತ ಆರೋಪಿತರು.
ಇವರು ಗಾಂಜಾ ಸೇವನೆ ಮಾಡುತ್ತಿದ್ದ ಸಮಯದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಗಮನಿಸಿ ಕೂಡಲೇ ಇವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಬಳಿಕ ದೂರು ದಾಖಲಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.