ಶಹರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಏರಿಯಾ ಡಾಮಿನೇಶನ್; 243 ಜನರ ವಿರುದ್ಧ ಕಾನೂನು ಕ್ರಮ

15 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪೊಲೀಸ್ ಏರಿಯಾ ಡಾಮಿನೇಷನ್ ಕ್ರಮ ಕೈಗೊಂಡು 170 ಜನರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
50 ರೌಡಿಶೀಟರ್‌ಗಳು, 36 ಜನ ಸಮೂಹ ಸೇರಿದ್ದವರು, 9 ವ್ಯಸನಿಗಳು, 61 ಜನ ಸಾರ್ವಜನಿಕ ಸ್ಥಳ, ಖಾಲಿ ಲೇಔಟ್, ರಸ್ತೆಗಳಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರು ಹಾಗೂ ಇತರೆ 18 ಜನ ಸೇರಿ 170 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 31 ಜನರ ವಿರುದ್ಧ ಕೋಟ್ಪಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಸಂಚಾರ ನಿಯಮ ಉ¯್ಲಂಘನೆ ಮಾಡಿದ 38 ಜನರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ಸೇರಿ 243 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮತ್ತೊಮ್ಮೆ ಕಾನೂನು ಉಲ್ಲಂಘಿಸದAತೆ ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net